ನವ ದಂಪತಿಯ ಮಲಗುವ ಕೋಣೆಯಲ್ಲಿ ಇವುಗಳನ್ನು ಇಡಬೇಡಿ, ದಾಂಪತ್ಯದಲ್ಲಿ ಉಂಟಾಗಬಹುದು ಬಿರುಕು…..!

ಮದುವೆಯ ನಂತರ ನವ ದಂಪತಿ ತಮ್ಮ ಕೋಣೆಯನ್ನು ಸುಂದರವಾಗಿ ಅಲಂಕರಿಸುತ್ತಾರೆ. ಅನೇಕ ರೀತಿಯ ಹೊಸ ಹೊಸ ಅಲಂಕಾರಿಕ ವಸ್ತುಗಳು, ಪ್ಲಾಂಟ್ಸ್‌, ಲ್ಯಾಂಪ್‌ ಇವನ್ನೆಲ್ಲ ಕೋಣೆಯಲ್ಲಿಡುತ್ತಾರೆ. ಆದರೆ ಮಲಗುವ ಕೋಣೆಯಲ್ಲಿ ಇರಿಸುವ ಅಲಂಕಾರಿಗ ವಸ್ತುಗಳ ಶುಭ ಮತ್ತು ಅಶುಭ ಪರಿಣಾಮಗಳನ್ನು ತಿಳಿದುಕೊಳ್ಳಬೇಕು. ವಾಸ್ತು ಶಾಸ್ತ್ರದ ಪ್ರಕಾರ ಕೆಲವು ನಿರ್ದಿಷ್ಟ ವಸ್ತುಗಳನ್ನು ಕೋಣೆಯಲ್ಲಿ ಇಡುವುದರಿಂದ ದಂಪತಿಗಳು ದೂರವಾಗುತ್ತಾರೆ. ಇದು ವಿಚ್ಛೇದನಕ್ಕೂ ಕಾರಣವಾಗುತ್ತದೆ. ಹಾಗಾಗಿ ಹೊಸದಾಗಿ ಮದುವೆಯಾದ ದಂಪತಿಗಳು ಕೋಣೆಯಲ್ಲಿ ಈ ಕೆಳಗಿನ ವಸ್ತುಗಳನ್ನು ಇಡಬಾರದು.

ನವ ವಿವಾಹಿತರ ಮಲಗುವ ಕೋಣೆಯಲ್ಲಿ ಆಕ್ರಮಣಕಾರಿ ಪ್ರಾಣಿಗಳು ಅಥವಾ ಜೀವಿಗಳ ಚಿತ್ರಗಳನ್ನು ಹಾಕಬಾರದು. ಕೋಪ ಅಥವಾ ಭೀಕರ ಭಂಗಿಯಲ್ಲಿರುವ ದೇವರು ಮತ್ತು ದೇವತೆಗಳ ಫೋಟೋ ಕೂಡ ಇರಬಾರದು. ಕೋಣೆಯಲ್ಲಿ ಯಾವುದೇ ದೇವರು ಮತ್ತು ದೇವತೆಗಳ ಚಿತ್ರವನ್ನು ಇಡಬೇಡಿ.

ನವ ದಂಪತಿಯ ಮಲಗುವ ಕೋಣೆಯಲ್ಲಿ ದೇವರ ಮನೆ ಅಥವಾ ಪೂಜಾ ಕೊಠಡಿ ಇರಬಾರದು. ಪೂಜೆಯ ಸಾಮಾನುಗಳು, ಗಂಗಾಜಲ ಇತ್ಯಾದಿಗಳನ್ನು ಇಡುವುದನ್ನು ತಪ್ಪಿಸಿ.

ಹೊಸದಾಗಿ ಮದುವೆಯಾದ ದಂಪತಿ  ತಮ್ಮ ಕೋಣೆಯಲ್ಲಿ ಕನ್ನಡಿಯನ್ನು ಇರಿಸುವಾಗ ದಿಕ್ಕಿನ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಬೆಡ್‌ನ ತಲೆಭಾಗದಲ್ಲಿರುವ ಹಲಗೆ ಅಥವಾ ಪಾದದ ದಿಕ್ಕಿನಲ್ಲಿ ಕನ್ನಡಿಯನ್ನು ಎಂದಿಗೂ ಇಡಬಾರದು. ಇಷ್ಟೇ ಅಲ್ಲ. ಮಲಗುವ ಕೋಣೆಯಲ್ಲಿ ಹಾಸಿಗೆಯ ತಲೆಯ ಬಳಿ ಗೋಡೆಯ ಮೇಲೆ ಗಡಿಯಾರ ಅಥವಾ ಫೋಟೋ ಫ್ರೇಮ್ ಹಾಕಬೇಡಿ.

ವಾಸ್ತು ತಜ್ಞರ ಪ್ರಕಾರ ನವ ದಂಪತಿಗಳ ಕೋಣೆಯ ಗೋಡೆಗಳ ಮೇಲೆ ಪೂರ್ವಜರ ಮತ್ತು ಸತ್ತವರ ಚಿತ್ರಗಳನ್ನು ನೇತು ಹಾಕಬಾರದು. ಅಷ್ಟೇ ಅಲ್ಲ ಯಾವುದೇ ಧಾರ್ಮಿಕ ಪುಸ್ತಕ, ಪುರಾಣ, ಚಾಲೀಸಾ ಇತ್ಯಾದಿಗಳನ್ನು ಇರಿಸಿದರೆ ತಕ್ಷಣವೇ ಬೇರೆಡೆಗೆ ವರ್ಗಾಯಿಸಿ.

ಬೆಡ್ ರೂಮಿನಲ್ಲಿ ಯಾವುದೇ ಚೂಪಾದ ವಸ್ತುಗಳು ಅಥವಾ ಜಂಕ್ ಅನ್ನು ಹಾಸಿಗೆಯೊಳಗೆ ಇಡಬೇಡಿ. ವಾಸ್ತು ಶಾಸ್ತ್ರದಲ್ಲಿ ಹೇಳಲಾದ ಈ ವಿಷಯಗಳ ಬಗ್ಗೆ ಕಾಳಜಿ ವಹಿಸುವುದರಿಂದ ದಾಂಪತ್ಯ ಜೀವನದಲ್ಲಿ ಮಾಧುರ್ಯ ಮತ್ತು ಪ್ರೀತಿ ಹೆಚ್ಚಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read