ಆಹಾರ ಸೇವಿಸಿದ ನಂತರವೂ ಮತ್ತೆ ಮತ್ತೆ ಹಸಿವಾಗುತ್ತಿದ್ದರೆ ನಿರ್ಲಕ್ಷಿಸಬೇಡಿ, ಇದು ಅಪಾಯಕಾರಿ ಕಾಯಿಲೆಗಳ ಲಕ್ಷಣ….!

ಕೆಲವೊಮ್ಮೆ ಊಟವಾದ ಮೇಲೂ ನಮಗೆ ಹಸಿವಾದಂತೆನಿಸುತ್ತದೆ. ಹೊಟ್ಟೆ ತುಂಬಿದ ಮೇಲೂ ಏನಾದ್ರೂ ತಿನ್ನಬೇಕು ಅನ್ನಿಸುತ್ತದೆ. ನಿಮಗೂ ಕೂಡ ಹಾಗಾಗುತ್ತಿದ್ದಲ್ಲಿ ಕೂಡಲೇ ಎಚ್ಚೆತ್ತುಕೊಳ್ಳಿ. ಇದು ಸಾಮಾನ್ಯವಲ್ಲದ ಕಾರಣಕ್ಕೆ, ಅನೇಕ ರೋಗಗಳ ಸಂಕೇತವೂ ಇರಬಹುದು. ಆಗಾಗ್ಗೆ ಹಸಿವಾಗುವುದು ಮತ್ತು ಪದೇ ಪದೇ ತಿನ್ನುವುದು ತೂಕ ಹೆಚ್ಚಾಗಲು ಕಾರಣವಾಗಬಹುದು. ಆಹಾರ ತಿಂದ ನಂತರ ಕೂಡ ಹಸಿವಿನ ಭಾವನೆ ಬರಲು ಕಾರಣವೇನು ತಿಳಿಯೋಣ.

ನಿದ್ರೆಯ ಕೊರತೆ: ಆರೋಗ್ಯ ತಜ್ಞರ ಪ್ರಕಾರ, ನಿದ್ರೆಯ ಕೊರತೆಯಿಂದಾಗಿ ಆಗಾಗ್ಗೆ ಹಸಿವು ಉಂಟಾಗುತ್ತದೆ. ಪ್ರತಿಯೊಬ್ಬರೂ ಕನಿಷ್ಠ 7 ರಿಂದ 8 ಗಂಟೆಗಳ ಕಾಲ ನಿದ್ದೆ ಮಾಡಬೇಕು. ಇದು ಮೆದುಳು ಮತ್ತು ಪ್ರತಿರಕ್ಷಣಾ ವ್ಯವಸ್ಥೆಯನ್ನು ಸರಿಯಾಗಿ ಇರಿಸಿಕೊಳ್ಳಲು ಸಹಾಯ ಮಾಡುತ್ತದೆ. ಉತ್ತಮ ನಿದ್ರೆಯು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ನಿದ್ರೆ ಪೂರ್ಣವಾಗದಿದ್ದಾಗ, ಹಸಿವನ್ನು ಸೂಚಿಸುವ ಗ್ರೆಲಿನ್ ಹಾರ್ಮೋನ್ ಹೆಚ್ಚಾಗುತ್ತದೆ. ಇದು ಮತ್ತೆ ಮತ್ತೆ ಹಸಿವನ್ನು ಉಂಟುಮಾಡುತ್ತದೆ. ಆದ್ದರಿಂದ ಚೆನ್ನಾಗಿ ಸಾಕಷ್ಟು ನಿದ್ದೆ ಮಾಡಿ.

ಮಧುಮೇಹ: ಅತಿಯಾದ ಹಸಿವಿಗೆ ಮಧುಮೇಹವೂ ಕಾರಣವಾಗಿರಬಹುದು. ಮಧುಮೇಹ ರೋಗಿಗಳಲ್ಲಿ ಗ್ಲೂಕೋಸ್, ಜೀವಕೋಶಗಳನ್ನು ತಲುಪುವುದಿಲ್ಲ. ಇದರಿಂದಾಗಿ ಶಕ್ತಿಯಾಗುವ ಬದಲು ಮೂತ್ರದ ಮೂಲಕ ಹೋಗುತ್ತದೆ. ಕೆಲವೊಮ್ಮೆ ಸಕ್ಕರೆಯ ಪ್ರಮಾಣ ಹೆಚ್ಚಾದಾಗಲೂ ಹಸಿವಿನ ಭಾವನೆ ಇರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಸಕ್ಕರೆ ಮಟ್ಟವನ್ನು ಒಮ್ಮೆ ಪರೀಕ್ಷಿಸಬೇಕು.

ಥೈರಾಯ್ಡ್: ಥೈರಾಯ್ಡ್ ರೋಗಿಗಳಿಗೆ ಮತ್ತೆ ಮತ್ತೆ ಹಸಿವು ಉಂಟಾಗುತ್ತದೆ. ಥೈರಾಯ್ಡ್ ಹಾರ್ಮೋನ್ ಮಟ್ಟ ಹೆಚ್ಚಾದಾಗ ಹೈಪರ್ ಥೈರಾಯ್ಡಿಸಮ್ ಉಂಟಾಗುತ್ತದೆ. ಇದು ಗ್ರೇವ್ಸ್ ಕಾಯಿಲೆ. ಅಂತಹ ಪರಿಸ್ಥಿತಿಯಲ್ಲಿ ಹೊಟ್ಟೆ ಖಾಲಿಯಾದಂತೆನಿಸುತ್ತದೆ, ಏನನ್ನಾದರೂ ತಿನ್ನುವ ಬಯಕೆಯಾಗುತ್ತದೆ.

ಪ್ರೋಟೀನ್ ಕೊರತೆ: ಆಹಾರದಲ್ಲಿ ಸಾಕಷ್ಟು ಪ್ರೋಟೀನ್ ತೆಗೆದುಕೊಳ್ಳದಿದ್ದರೆ, ಮತ್ತೆ ಮತ್ತೆ ಹಸಿವನ್ನು ಅನುಭವಿಸಬಹುದು. ಏಕೆಂದರೆ ಪ್ರೋಟೀನ್ ಸಹಾಯದಿಂದ ಮಾತ್ರ ಆ ಹಾರ್ಮೋನ್ ರೂಪುಗೊಳ್ಳುತ್ತದೆ, ಇದು ಹಸಿವಿನ ನೆರವೇರಿಕೆಯನ್ನು ಸೂಚಿಸುತ್ತದೆ.ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ನಡೆಸಿದ ಸಂಶೋಧನೆಯ ಪ್ರಕಾರ, ಆಹಾರದಲ್ಲಿ ಸಾಕಷ್ಟು ಪ್ರೋಟೀನ್ ಇದ್ದರೆ, ನೀವು ದೀರ್ಘಕಾಲದವರೆಗೆ ಹೊಟ್ಟೆ ತುಂಬಿದ ಅನುಭವವನ್ನು ಹೊಂದುತ್ತೀರಿ. ಆಹಾರವನ್ನು ಸೇವಿಸಿದ ನಂತರವೂ ನಿಮಗೆ ಹಸಿವು ಅನಿಸಿದರೆ, ಹೆಚ್ಚಿನ ಪ್ರೋಟೀನ್ ಭರಿತ ವಸ್ತುಗಳನ್ನು ಊಟದಲ್ಲಿ ಸೇರಿಸಬೇಕು.

ಒತ್ತಡ: ಅತಿಯಾದ ಒತ್ತಡವೂ ಹಸಿವಿನ ಭಾವನೆಗೆ ಕಾರಣವಾಗಿದೆ. ಆರೋಗ್ಯ ತಜ್ಞರ ಪ್ರಕಾರ, ಅತಿಯಾದ ಒತ್ತಡದಿಂದ ದೇಹದಲ್ಲಿ ಕಾರ್ಟಿಸೋಲ್ ಹಾರ್ಮೋನ್ ಹೆಚ್ಚಾಗುತ್ತದೆ. ಇದು ಹಸಿವಿನ ಮೇಲೆ ನೇರ ಪರಿಣಾಮ ಬೀರುತ್ತದೆ. ಖಿನ್ನತೆ, ಆತಂಕದ ಅಸ್ವಸ್ಥತೆಯಲ್ಲೂ ಹಸಿವಿನ ಸಮಸ್ಯೆ ಹೆಚ್ಚು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read