ಈ ಆಹಾರವನ್ನು ಪದೇ ಪದೇ ಬಿಸಿ ಮಾಡಿ ತಿನ್ನಬೇಡಿ

ಕೆಲವರು ಉಳಿದ ಆಹಾರ ಪದಾರ್ಥಗಳನ್ನು ಫ್ರಿಡ್ಜ್ ನಲ್ಲಿಟ್ಟು ಮಾರನೆಯ ದಿನ ಬಿಸಿ ಮಾಡಿ ತಿನ್ನುತ್ತಾರೆ. ನಿಜಕ್ಕೂ ಮತ್ತೆ ಬಿಸಿ ಮಾಡುವುದು ಸರಿಯಾದ ಪದ್ಧತಿಯಲ್ಲ. ಮುಖ್ಯವಾಗಿ ಕೆಲವು ಪದಾರ್ಥಗಳನ್ನು ಬಿಸಿಯೇ ಮಾಡಬಾರದು. ಅವು ಯಾವುವೆಂದರೆ.

ಪಾಲಾಕ್ ಸೊಪ್ಪು

ಈ ಸೊಪ್ಪಿನಿಂದ ಮಾಡಿದ ಯಾವುದೇ ಅಡುಗೆಯನ್ನು ಪುನಃ ಬಿಸಿ ಮಾಡಬಾರದು. ಅದರಲ್ಲೂ ಓವೆನ್ ನಲ್ಲಿ ಬಿಸಿ ಮಾಡಬಾರದು. ಯಾಕೆಂದರೆ ಈ ಸೊಪ್ಪಿನಲ್ಲಿರುವ ನೈಟ್ರೇಟ್ ಬಿಸಿ ಮಾಡಿದಾಗ ವ್ಯರ್ಥ ವಾಗುತ್ತದೆ. ಅಷ್ಟೇ ಅಲ್ಲ ಅದು ಕ್ಯಾನ್ಸರ್ ಗೂ ಕಾರಣವಾಗಬಹುದು. ಹಾಗೆಯೇ ಸೊಪ್ಪಿನಲ್ಲಿರುವ ಕಬ್ಬಿಣ ಕೂಡ ಫ್ರೀ ರಾಡಿಕಲ್ಸ್ ಅನ್ನು ಬಿಡುಗಡೆ ಮಾಡಿ ಅನಾರೋಗ್ಯಕ್ಕೆ ತುತ್ತಾಗುವಂತೆ ಮಾಡುತ್ತದೆ.

ಅಣಬೆ

ಮಾಂಸ ಯಕೃತ್ತುಗಳು ಸಮೃದ್ಧವಾಗಿ ಲಭಿಸುವ ಪದಾರ್ಥಗಳಲ್ಲಿ ಅಣಬೆ ಮುಖ್ಯವಾದುದು. ಇದರಿಂದ ಮಾಡಿದ ಅಡುಗೆ ಪದಾರ್ಥಗಳನ್ನು ತಯಾರಿಸಿದರೆ ತಿಂದು ಮುಗಿಸಬೇಕು. ಮತ್ತೆ ಬಿಸಿ ಮಾಡಿ ಉಪಯೋಗಿಸಬಾರದು. ಹೀಗೆ ಮಾಡುವುದರಿಂದ ಟಾಕ್ಸಿನ್ ಗಳು ಬಿಡುಗಡೆಯಾಗಿ ಜೀರ್ಣ ವ್ಯವಸ್ಥೆಗೆ ಮಾರಕವಾಗುತ್ತದೆ.

ಆಲೂಗಡ್ಡೆ

ಆಲೂಗಡ್ಡೆಯಲ್ಲಿ ಪೊಟ್ಯಾಶಿಯಂ, ವಿಟಮಿನ್ ಸಿ, ವಿಟಮಿನ್ ಬಿ 6 ಹೆಚ್ಚಾಗಿರುತ್ತದೆ. ಇದನ್ನು ಬಿಸಿ ಮಾಡಿದಾಗ ಮೃತ ಬ್ಯಾಕ್ಟೀರಿಯ ಬಿಡುಗಡೆಯಾಗುತ್ತದೆ. ಇದು ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಮೊಟ್ಟೆ

ಮೊಟ್ಟೆಯಲ್ಲಿ ಪ್ರೊಟೀನ್ ಅಧಿಕವಾಗಿರುತ್ತದೆ. ಬೇಯಿಸಿದ ಮೇಲೆ ಮೊಟ್ಟೆಯನ್ನು ತಿಂದು ಬಿಡಬೇಕು. ಗಂಟೆಗಟ್ಟಲೆ ಹಾಗೆಯೇ ಇಡುವುದು ಒಳ್ಳೆಯದಲ್ಲ. ಬಿಸಿ ಬೇಕೆಂದು ಓವನ್ ಬಳಸಬಾರದು. ಹಾಗೆ ಬಿಸಿ ಮಾಡಿದರೆ ಜೀರ್ಣಕ್ರಿಯೆಯಲ್ಲಿ ಅನೇಕ ಸಮಸ್ಯೆಗಳು ಎದುರಾಗುತ್ತವೆ.

ಚಿಕನ್

ಚಿಕನ್ ನಿಂದ ಮಾಡಿದ ಯಾವುದೇ ಅಡುಗೆಯನ್ನು ಬಿಸಿ ಮಾಡಬಾರದು. ಹಾಗೆ ಬಿಸಿ ಮಾಡಿದ ಪದಾರ್ಥಗಳನ್ನು ತಿನ್ನುವುದರಿಂದ ಜೀರ್ಣ ವ್ಯವಸ್ಥೆಯ ಕೆಲಸದ ರೀತಿ ಬಹಳ ನಿಧಾನವಾಗುತ್ತದೆ. ಇದರಿಂದ ಅನೇಕ ಸಮಸ್ಯೆಗಳು ಉಂಟಾಗುತ್ತವೆ. ವಾಂತಿ, ಭೇದಿ ಮುಂತಾದ ಸಮಸ್ಯೆಗಳು ಕಾಡುತ್ತವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read