ಕಾರ್ತಿಕ ಮಾಸದಲ್ಲಿ ಅಪ್ಪಿತಪ್ಪಿಯೂ ಈ ತಪ್ಪು ಮಾಡಬೇಡಿ

ಕಾರ್ತಿಕ ಮಾಸದಲ್ಲಿ ಸೂರ್ಯ ದುರ್ಬಲನಾಗ್ತಾನೆ. ಈ ಸಮಯದಲ್ಲಿ ಶಕ್ತಿ ಮತ್ತು ಬೆಳಕು ಎರಡೂ ದುರ್ಬಲವಾಗುತ್ತದೆ. ಈ ಸಮಯದಲ್ಲಿ ದೀಪವನ್ನು ಬೆಳಗಿಸುವ ಮೂಲಕ ವ್ಯಕ್ತಿಗಳು ದೇವರು, ಶಕ್ತಿ ಮತ್ತು ಬೆಳಕಿನೊಂದಿಗೆ ಸಂಬಂಧವನ್ನು ಸ್ಥಾಪಿಸುತ್ತಾರೆ. ಕಾರ್ತಿಕ ತಿಂಗಳಲ್ಲಿ ದಾನ ಮಾಡಿದ ದೀಪವು ಎಂದಿಗೂ ವಿಫಲವಾಗುವುದಿಲ್ಲ.

ಈ ತಿಂಗಳಲ್ಲಿ ವಿಭಿನ್ನ ದೀಪಗಳನ್ನು ಬೆಳಗಿಸುವ ಮೂಲಕ, ನೀವು ವಿಭಿನ್ನ ಆಸೆಗಳನ್ನು ಪೂರೈಸಿಕೊಳ್ಳಬಹುದು. ಕಾರ್ತಿಕ ಮಾಸದಲ್ಲಿ ದೀಪ ದಾನಕ್ಕೆ ಮಹತ್ವದ ಸ್ಥಾನವಿದೆ.

ದೀಪ ಬೆಳಗುವ ವೇಳೆ ಕೂದಲನ್ನು ಕಟ್ಟಿರಬೇಕು. ಎಂದೂ ಕೂದಲು ಬಿಚ್ಚಿಕೊಂಡು ದೀಪ ಬೆಳಗಬಾರದು. ಪೂರ್ವ ಅಥವಾ ಪಶ್ಚಿಮ ದಿಕ್ಕಿನಲ್ಲಿ ಮುಖ ಮಾಡಿ ದೀಪ ಬೆಳಗಬೇಕು.

ಸಾಸಿವೆ ಎಣ್ಣೆ ದೀಪವನ್ನು ಎಂದಿಗೂ ಬೆಳಗಬಾರದು. ಎಳ್ಳು ಅಥವಾ ತುಪ್ಪದ ದೀಪವನ್ನು ಹಚ್ಚಬೇಕು. ದೀಪವನ್ನು ಬಾಯಲ್ಲಿ ಗಾಳಿ ಊದಿ ಆರಿಸಬಾರದು. ಆರಿಸುವ ಅವಶ್ಯಕತೆಯಿದ್ರೆ ಬಟ್ಟೆ ಅಥವಾ ಬೇರೆ ವಸ್ತುವಿನಿಂದ ಗಾಳಿ ಬೀಸಿ ಆರಿಸಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read