ಖಾಲಿ ಹೊಟ್ಟೆಯಲ್ಲಿ ಈ 3 ವಸ್ತುಗಳನ್ನು ಸೇವಿಸಬೇಡಿ; ತಿಂದರೆ ಅಪಾಯ ಗ್ಯಾರಂಟಿ….!

ಹೊಟ್ಟೆ ಖಾಲಿ ಇದ್ದಾಗ ಅಥವಾ ತುಂಬಾ ಹಸಿವಾದಾಗ ಯಾವ ಕೆಲಸವನ್ನೂ ಮಾಡಲು ಸಾಧ್ಯವಾಗುವುದಿಲ್ಲ. ಹೆಚ್ಚು ಹೊತ್ತು ಹಸಿದಿದ್ದರೆ ಆಸಿಡಿಟಿ, ಹೊಟ್ಟೆ ನೋವು, ವಾಂತಿ ಮುಂತಾದ ಸಮಸ್ಯೆಗಳು ಶುರುವಾಗುತ್ತವೆ. ಅದರಲ್ಲೂ ಬೆಳಗಿನ ಜಾವದಿಂದಲೇ ಹಸಿದುಕೊಂಡಿದ್ದರೆ ಸಮಸ್ಯೆಗಳು ತಪ್ಪಿದ್ದಲ್ಲ. ಹಾಗಾಗಿ ಆಹಾರ ಮತ್ತು ಪಾನೀಯಗಳ ಬಗ್ಗೆ ತುಂಬಾ ಜಾಗರೂಕರಾಗಿರಬೇಕು.

ಗೊತ್ತಿಲ್ಲದೇ ಏನನ್ನಾದರೂ ತಲೆಕೆಳಗಾಗಿ ಸೇವಿಸಿದರೆ ಅದು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಕೆಲವೊಂದು ಪದಾರ್ಥಗಳನ್ನು ಹಸಿದ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ತೊಂದರೆಯಾಗುತ್ತವೆ. ಅವು ಯಾವುವು ಅನ್ನೋದನ್ನು ನೋಡೋಣ.

ಮದ್ಯ: ಆಲ್ಕೋಹಾಲ್ ಕುಡಿಯುವುದು ಆರೋಗ್ಯಕ್ಕೆ ಹಾನಿಕಾರಕ. ಅದನ್ನು ಸಂಪೂರ್ಣವಾಗಿ ತ್ಯಜಿಸಿದರೆ ಉತ್ತಮ. ಮದ್ಯಪಾನದಿಂದ ಯಕೃತ್ತಿಗೆ ಹಾನಿಯಾಗುತ್ತದೆ. ಹೃದಯಾಘಾತದ ಅಪಾಯವನ್ನು ಇದು ಹೆಚ್ಚಿಸುತ್ತದೆ. ಖಾಲಿ ಹೊಟ್ಟೆಯಲ್ಲಿ ಮದ್ಯಪಾನ ಮಾಡುವುದು ಇನ್ನೂ ಅಪಾಯಕಾರಿ. ನೀವು ಏನನ್ನೂ ತಿನ್ನದೆ ಆಲ್ಕೋಹಾಲ್ ಸೇವಿಸಿದರೆ, ಅದು ನೇರವಾಗಿ ನಿಮ್ಮ ರಕ್ತಪ್ರವಾಹವನ್ನು ತಲುಪುತ್ತದೆ. ಇದರಿಂದಾಗಿ ನಾಡಿ ಮಿಡಿತ ಕುಸಿಯಬಹುದು ಮತ್ತು ರಕ್ತದೊತ್ತಡವೂ ಹೆಚ್ಚಾಗುತ್ತದೆ. ಅಥವಾ ರಕ್ತದೊತ್ತಡ ತೀವ್ರ ಇಳಿಕೆಯೂ ಆಗಬಹುದು.

ಚೂಯಿಂಗ್ ಗಮ್ : ಮಕ್ಕಳು ಮತ್ತು ಹದಿಹರೆಯದವರಿಗೆ ಚೂಯಿಂಗ್‌ ಗಮ್‌ ತಿನ್ನುವ ಅಭ್ಯಾಸವಿರುತ್ತದೆ. ಆದರೆ ಖಾಲಿ ಹೊಟ್ಟೆಯಲ್ಲಿ ಚೂಯಿಂಗ್‌ ಗಮ್‌ ಅಗಿದರೆ ತೊಂದರೆಗಳಿಗೆ ಆಹ್ವಾನ ಕೊಟ್ಟಂತೆ. ನೈಸರ್ಗಿಕ ಪ್ರಕ್ರಿಯೆಯ ಪ್ರಕಾರ, ನೀವು ಏನನ್ನಾದರೂ ಅಗಿಯಲು ಪ್ರಾರಂಭಿಸಿದರೆ ಜೀರ್ಣಕಾರಿ ಆಮ್ಲವು ಹೊಟ್ಟೆಯಲ್ಲಿ ಬಿಡುಗಡೆಯಾಗಲು ಪ್ರಾರಂಭಿಸುತ್ತದೆ. ಖಾಲಿ ಹೊಟ್ಟೆಯಲ್ಲಿ, ಈ ಆಮ್ಲಗಳು ಹೊಟ್ಟೆಯ ಹುಣ್ಣು ಅಥವಾ ಆಮ್ಲೀಯತೆಯಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಆದ್ದರಿಂದ, ನೀವು ಚ್ಯೂಯಿಂಗ್ ಗಮ್ ಅನ್ನು ಅಗಿಯಲು ಬಯಸಿದರೆ, ಊಟ ಮಾಡಿದ ನಂತರವೇ ಈ ಕೆಲಸವನ್ನು ಮಾಡಿ.

ಕಾಫಿ : ಕಾಫಿ ಕುಡಿಯುವುದರಿಂದ ನಿಮ್ಮ ದಣಿವು ದೂರವಾಗುತ್ತದೆ ಮತ್ತು ತಾಜಾತನದ ಭಾವನೆಯನ್ನು ಇದು ನೀಡುತ್ತದೆ. ಅನೇಕರು ಬೆಳಿಗ್ಗೆ ಎದ್ದ ತಕ್ಷಣ ಕಾಫಿ ಕುಡಿಯುವ ಅಭ್ಯಾಸವನ್ನು ಹೊಂದಿರುತ್ತಾರೆ. ಆದರೆ ಈ ರೀತಿ ಮಾಡಬೇಡಿ. ಏಕೆಂದರೆ ಈ ಪಾನೀಯದಲ್ಲಿರುವ ಸಂಯುಕ್ತಗಳು ಹೈಡ್ರೋಕ್ಲೋರಿಕ್ ಆಮ್ಲವನ್ನು ಹೆಚ್ಚಿಸುತ್ತವೆ. ಹೊಟ್ಟೆಯಲ್ಲಿ ಒಂದು ರೀತಿಯ ಸುಡುವ ಸಂವೇದನೆಯನ್ನು ಇದು ಉಂಟುಮಾಡಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read