ಚಳಿಗಾಲದಲ್ಲಿ ಅಪ್ಪಿತಪ್ಪಿಯೂ ಇವುಗಳನ್ನು ಮುಖಕ್ಕೆ ಹಚ್ಚಬೇಡಿ

ಚಳಿಗಾಲದಲ್ಲಿ ಶುಷ್ಕ ವಾತಾವರಣದಿಂದ ಚರ್ಮ ತೇವಾಂಶ ಕಳೆದುಕೊಂಡು ಡ್ರೈ ಆಗುತ್ತದೆ. ಅದರಲ್ಲೂ ಒಣ ಚರ್ಮದವರು ಚಳಿಗಾಲದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುತ್ತಾರೆ.

ಹಾಗಾಗಿ ಚಳಿಗಾಲದಲ್ಲಿ ಅಪ್ಪಿತಪ್ಪಿಯೂ ಈ ವಸ್ತುಗಳನ್ನು ಮುಖಕ್ಕೆ ಹಚ್ಚಬೇಡಿ.

*ನಿಂಬೆ: ಇದರಲ್ಲಿ ವಿಟಮಿನ್ ಸಿ ಅಧಿಕವಾಗಿದ್ದು ಇದು ಚರ್ಮಕ್ಕೆ ತುಂಬಾ ಒಳ್ಳೆಯದು. ಆದರೆ ಇದು ಚರ್ಮವನ್ನು ಒಣಗಿಸುತ್ತದೆ. ಹಾಗಾಗಿ ಇದನ್ನು ಚಳಿಗಾಲದಲ್ಲಿ ಮುಖಕ್ಕೆ ಹಚ್ಚಬೇಡಿ.

*ಅಕ್ಕಿಹಿಟ್ಟು :ಇದು ಚರ್ಮವನ್ನು ಆಳವಾಗಿ ಶುದ್ಧೀಕರಿಸುತ್ತದೆ. ಹಾಗಾಗಿ ಚಳಿಗಾಲದಲ್ಲಿ ಇದನ್ನು ಮುಖಕ್ಕೆ ಹಚ್ಚಿದರೆ ಚರ್ಮದ ಮೇಲೆ ದದ್ದುಗಳು ಮೂಡುತ್ತವೆ.

*ಸೌತೆಕಾಯಿ : ಇದು ಚರ್ಮವನ್ನು ಮೃದುಗೊಳಿಸುತ್ತದೆ. ಆದರೆ ಇದು ಮುಖದ ಆಯಿಲ್ ಅಂಶವನ್ನು ಹೀರಿಕೊಂಡು ಚರ್ಮ ಒಣಗುವಂತೆ ಮಾಡುತ್ತದೆ.

*ಆಲೂಗಡ್ಡೆ : ಇದು ಚರ್ಮದ ಮೇಲಿನ ಕಲೆಗಳನ್ನು ತೆಗೆದು ಹಾಕುತ್ತದೆ. ಆದರೆ ಇದರಲ್ಲಿರುವ ಪಿಷ್ಠವು ಚಳಿಗಾಲದಲ್ಲಿ ಚರ್ಮವನ್ನು ಹೆಚ್ಚು ಒಣಗಿಸುತ್ತದೆ.

*ಟೊಮೆಟೊ : ಟೊಮೆಟೊವನ್ನು ಹಲವು ಫೇಸ್ ಪ್ಯಾಕ್ ಗಳಲ್ಲಿ ಬಳಸಲಾಗುತ್ತದೆ. ಆದರೆ ಇದರಲ್ಲಿರುವ ಆಮ್ಲೀಯ ಗುಣಗಳು ಚರ್ಮವನ್ನು ಒಣಗಿಸುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read