ಆಕರ್ಷಕ ಕೂದಲಿಗಾಗಿ ಮನೆಯಲ್ಲೇ ಮಾಡಿಕೊಳ್ಳಿ ಹೇರ್‌ ಸ್ಪಾ

ಆಕರ್ಷಕ ಕೂದಲು ಯಾರಿಗೆ ಬೇಡ ಹೇಳಿ? ಸೌಂದರ್ಯದ ಬಹು ದೊಡ್ಡ ಪ್ಲಸ್ ಪಾಯಿಂಟ್‌ ಅಂದರೆ ಆಕರ್ಷಕವಾದ ಕೂದಲು. ಮೃದುವಾದ, ಸೊಂಪಾದ ಆಕರ್ಷಕ ಕೂದಲಿಗಾಗಿ ಆರೈಕೆ ಮಾಡಲೇಬೇಕು. ಪಾರ್ಲರ್‌ ಅಥವಾ ಸ್ಪಾಗಳಿಗೆ ಹೋಗಿ ಹೇರ್‌ ಕೇರ್ ಮಾಡಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ.

ಆದರೆ ಪಾರ್ಲರ್‌ನಲ್ಲಿ ಮಾಡುವಂತೆಯೇ ಮನೆಯಲ್ಲೇ ಮಾಡಿ ಆರೈಕೆ ಮಾಡಬಹುದು. ಈ ಸರಳ ವಿಧಾನಗಳನ್ನು ಅನುಸರಿಸಿದರೆ, ಆಕರ್ಷಕ ಕೂದಲು ನಿಮ್ಮದಾಗುತ್ತದೆ.

ಹೇರ್‌ ಸ್ಪಾದಲ್ಲಿ 5 ಸ್ಟೆಪ್‌. ಮೊದಲು ಮಸಾಜ್‌, ಸ್ಟೀಮಿಂಗ್, ಕ್ಲೆನ್ಸಿಂಗ್‌, ಕಂಡಿಷಿನಿಂಗ್ ಮತ್ತು ಹೇರ್‌ ಮಾಸ್ಕ್‌.

ಮಸಾಜ್

ಕೊಬ್ಬರಿ ಎಣ್ಣೆಯನ್ನು ಉಗುರು ಬೆಚ್ಚಗೆ ಬಿಸಿ ಮಾಡಿ, ಆ ಎಣ್ಣೆಯಿಂದ ತಲೆಗೆ ಚೆನ್ನಾಗಿ ಮಸಾಜ್‌ ಮಾಡಿ.

ಸ್ಟೀಮಿಂಗ್‌

ನಂತರ 4 ಮಗ್ ನೀರನ್ನು ಚೆನ್ನಾಗಿ ಕುದಿಸಿ, ಅದನ್ನು ಬಕೆಟ್‌ಗೆ ಸುರಿದು ಅದಕ್ಕೆ ತಣ್ಣೀರು ಮಿಕ್ಸ್‌ ಮಾಡಿ, ಉಗುರು ಬೆಚ್ಚಗಿನ ನೀರು ಮಾಡಿ ಅದರಲ್ಲಿ ತೆಳು ಟವಲ್‌ ಅದ್ದಿ ಹಿಂಡಿ ತಲೆಗೆ ಸುತ್ತಿ 20 ನಿಮಿಷ ಬಿಡಿ. ಇದರಿಂದ ಕೂದಲಿನ ಬುಡ ಎಣ್ಣೆಯನ್ನು ಚೆನ್ನಾಗಿ ಹೀರಿಕೊಳ್ಳುತ್ತದೆ.

ಮಾಸ್ಕ್‌

ನಂತರ ಶ್ಯಾಂಪೂ ಹಚ್ಚಿ ತಲೆಯನ್ನು ವಾಶ್‌ ಮಾಡಿ, ನಂತರ ಮೊಸರು, ಮೊಟ್ಟೆಯ ಬಿಳಿ ಅಥವಾ ಲೋಳೆರಸ ಹೀಗೆ ಮನೆಯಲ್ಲೇ ಸಿಗುವ ಕಂಡೀಷನರ್‌ ಹಚ್ಚಿ 20 ನಿಮಿಷ ಬಿಡಿ.

ಕ್ಲೆನ್ಸಿಂಗ್‌

ಈಗ ಶ್ಯಾಂಪೂ ಹಚ್ಚಿ ಚೆನ್ನಾಗಿ ತೊಳೆಯರಿ.

ಕಂಡೀಷನರ್‌

ಕಂಡೀಷನರ್‌ ಹಚ್ಚಿ ತಲೆಯನ್ನು ತೊಳೆದು ರೂಮಿನ ಉಷ್ಣತೆಯಲ್ಲಿ ಕೂದಲನ್ನು ಒಣಗಿಸಿ, ಬಾಚಿ. ಈ ರೀತಿ ತಿಂಗಳಿಗೊಮ್ಮೆ ಮಾಡಿದರೆ ಕೂದಲು ಆಕರ್ಷಕವಾಗಿರುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read