ಚೆನ್ನೈ: ಡಿಎಂಕೆ ಸಂಸದ ಎ.ರಾಜಾ ವೇದಿಕೆ ಮೇಲೆ ಭಾಷಣ ಮಡುತ್ತಿದ್ದ ವೇಳೆ ಫೆಡ್ ಲೈಟ್ ಕಂಬ ಕುಸಿದು ಬಿದ್ದಿದ್ದು, ಸಂಸದರು ಹಾಗೂ ವೇದಿಕೆ ಮೇಲಿದ್ದವರು ಕೂದಲೆಳೆ ಅಂತರದಲ್ಲಿ ಬಚಾವಾಗಿರುವ ಘಟನೆ ನಡೆದಿದೆ.
ತಮಿಳುನಾಡಿನ ಮೈಲಾಡುತುರೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಈ ಘಟನೆ ನಡೆದಿದೆ. ಸಂಸದ ಎ.ರಾಜಾ ವೇದಿಕೆಯಲ್ಲಿ ಭಾಷಣ ಮಾಡುತ್ತಿದ್ದರು. ಈ ವೇಳೆ ಬಿರುಗಾಳಿಗೆ ಫೆಡ್ ಲೈಟ್ ಕಂಬ ಏಕಾಏಕಿ ಡಯಾಸ್ ಮೇಲೆಯೇ ಕುಸಿದು ಬಿದ್ದಿದೆ. ಅದೃಷವಶಾತ್ ಸಂಸದರು ಪಾರಾಗಿದ್ದಾರೆ.
ವೇದಿಕೆಯಲ್ಲಿ ಸಚಿವ ಶಿವ ಮೆಯ್ಯನಾಥನ್ ಸೇರಿದಂತೆ ಹಲವು ಉಪಸ್ಥಿತಿತರಿದ್ದರು. ಸಂಸದರು ಭಾಷಣ ಮಾಡುತ್ತಿದ್ದ ವೇಳೆ ಫೆಡ್ ಲೈಟ್ ಕಂಬ ಬೀಳುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.