ಡಿಎಲ್ ಪಡೆಯುವವರಿಗೆ ಮುಖ್ಯ ಮಾಹಿತಿ: 35 RTOಗಳಲ್ಲಿ ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥ ನಿರ್ಮಾಣ

ಬೆಂಗಳೂರು: ಡಿಎಲ್ ನೀಡುವ ಪ್ರಕ್ರಿಯೆಯಲ್ಲಿ ಅಧಿಕಾರಿಗಳು, ಸಿಬ್ಬಂದಿ ಮಧ್ಯ ಪ್ರವೇಶಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಸ್ವಯಂ ಚಾಲಿತ ಜಾಲನಾ ಪರೀಕ್ಷಾ ಪಥಗಳನ್ನು ಸ್ಥಾಪಿಸಲು ಸಾರಿಗೆ ಇಲಾಖೆ ಮುಂದಾಗಿದೆ.

ರಾಜ್ಯದ 35 ಆರ್.ಟಿ.ಒ.ಗಳಲ್ಲಿ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥಗಳನ್ನು ಸ್ಥಾಪಿಸಲು ರಾಜ್ಯ ಸಾರಿಗೆ ಇಲಾಖೆ ನಿರ್ಧರಿಸಿದ್ದು, ಮೊದಲ ಹಂತದಲ್ಲಿ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ, ಜ್ಞಾನಭಾರತಿ, ಹಾಸನ, ಮೈಸೂರು, ಧಾರವಾಡ, ಕಲಬುರಗಿ, ಶಿವಮೊಗ್ಗದಲ್ಲಿ ಸ್ವಯಂಚಾಲಿತಾ ಪರೀಕ್ಷಾ ಪಥ ಸ್ಥಾಪನೆ ಆಗಲಿವೆ‌.

ಇದರ ಮೂಲಕವೇ ಚಾಲಕರ ಚಾಲನಾ ಕೌಶಲ್ಯಗಳನ್ನು ನಿರ್ಣಯಿಸಲಾಗುವುದು, ಚಾಲಕರಿಗೆ ಡಿಎಲ್ ನೀಡುವ ಮೊದಲು ಅವರ ಚಾಲನಾ ಕೌಶಲ್ಯ ಪರಿಶೀಲನೆ ಒಳಪಡಿಸಲಾಗುವುದು, ಇದರಲ್ಲಿ ಯಾವುದೇ ಮಾನವ ಸಂವಹನ ಇರುವುದಿಲ್ಲ. ಚಾಲಕರ ಕುಶಲತೆಗೆ ಅನುಗುಣವಾಗಿ ಡಿಎಲ್ ದೊರೆಯಲಿದೆ ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read