ಪ್ರತಿ ನಿಲ್ದಾಣದಲ್ಲೂ ಇಳಿಯುವುದು, ಹತ್ತುವುದು ಮಾಡಬೇಡಿ: ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಡಿಕೆಶಿ ಕಿವಿಮಾತು

ಬೆಂಗಳೂರು: ಕಾಂಗ್ರೆಸ್ ಎಂಬ ಬಸ್ ಹತ್ತಿದ ಮೇಲೆ ಕೊನೆಯವರೆಗೂ ಉಳಿಯಬೇಕು ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಮಾಜಿ ಸಂಸದ ಆಯನೂರು ಮಂಜುನಾಥ್, ಶಿಕಾರಿಪುರದ ನಾಗರಾಜ ಗೌಡ ಅವರನ್ನು ಪಕ್ಷಕ್ಕೆ ಸ್ವಾಗತಿಸಿದ ವೇಳೆ ಮಾತನಾಡಿದ ಡಿಸಿಎಂ ಡಿಕೆಶಿ, ಪ್ರತಿ ನಿಲ್ದಾಣದಲ್ಲಿಯೂ ಇಳಿಯುವುದು, ಹತ್ತುವುದು ಮಾಡಬಾರದು. ಹಾಗೆ ಮಾಡಿದಲ್ಲಿ ಗೌರವ ಇರುವುದಿಲ್ಲ. ರಾಜಕಾರಣದಲ್ಲಿ ಸಹನೆ, ತಾಳ್ಮೆ ಇರಬೇಕು. ಪಕ್ಷ ನಿಷ್ಠೆಯಿಂದ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.

ಪಕ್ಷ ನಿಷ್ಠರಾಗಿ ಉಳಿದಲ್ಲಿ ಹಿರಿತನ, ಜವಾಬ್ದಾರಿ, ಗೌರವ ತನ್ನಿಂದ ತಾನೇ ಬರುತ್ತದೆ. ಪಕ್ಷವನ್ನು ಬಿಡುವುದು, ಮತ್ತೆ ಸೇರ್ಪಡೆ ಆಗುವುದು ಮಾಡಿದರೆ ನಾಯಕತ್ವಕ್ಕೂ ಧಕ್ಕೆಯಾಗುತ್ತದೆ. ರಾಜ್ಯದ ಸಮಸ್ತ ಕಾರ್ಯಕರ್ತರು ಮತ್ತು ಮುಖಂಡರಿಗೆ ಈ ಕಿವಿಮಾತು ಹೇಳುತ್ತಿದ್ದೇನೆ. ಸ್ಟಾಪ್ ಸಿಕ್ಕಲ್ಲೆಲ್ಲಾ ಇಳಿಯಬೇಡಿ ಎಂದು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read