ವಿಚ್ಛೇದನ ಪಡೆದ ಮುಸ್ಲಿಂ ಮಹಿಳೆ ಮತ್ತೊಂದು ಮದುವೆಯಾಗುವವರೆಗೂ ಜೀವನಾಂಶ ಪಡೆಯಲು ಅರ್ಹ; ಹೈಕೋರ್ಟ್ ಮಹತ್ವದ ತೀರ್ಪು

ಮುಸ್ಲಿಂ ಮಹಿಳೆಯರ ವಿಚ್ಛೇದನ ಕುರಿತಂತೆ ಉತ್ತರ ಪ್ರದೇಶದ ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ವಿಚ್ಛೇದನ ಪಡೆದ ಮಹಿಳೆ ಮತ್ತೊಂದು ಮದುವೆಯಾಗುವವರೆಗೂ ವಿಚ್ಛೇದಿತ ಪತಿಯಿಂದ ಜೀವನಾಂಶ ಪಡೆಯಲು ಅರ್ಹಳು ಎಂದು ತಿಳಿಸಿದೆ.

ಪ್ರಕರಣದ ವಿವರ: ಜೈದಾ ಖಾತೂನ್ ಎಂಬವರಿಂದ ಅವರ ಪತಿ ನರುಲ್ ಹಕ್ 11 ವರ್ಷಗಳ ದಾಂಪತ್ಯದ ಬಳಿಕ ಘಾಜಿಪುರದ ಕೌಟುಂಬಿಕ ನ್ಯಾಯಾಲಯದಿಂದ ವಿಚ್ಛೇದನ ಪಡೆದಿದ್ದರು. ಈ ಸಂದರ್ಭದಲ್ಲಿ ತಮ್ಮ ಮಾಜಿ ಪತ್ನಿಗೆ ‘iddat’ ಅವಧಿ ಅಂದರೆ ವಿಚ್ಛೇದನ ಪಡೆದ ಮೂರು ತಿಂಗಳು 13 ದಿನಗಳ ಅವಧಿಗೆ ಜೀವನಾಂಶ ನೀಡಲು ಆದೇಶಿಸಲಾಗಿತ್ತು.

ಇದನ್ನು ಪ್ರಶ್ನಿಸಿ ಜೈದಾ ಖಾತೂನ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಪ್ರಕರಣದ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಪ್ರಕಾಶ್ ಕೇಸರ್ವಾನಿ ಹಾಗೂ ಮಹಮ್ಮದ್ ಅಝರ್ ಹುಸೇನ್ ಇದ್ರಿಸ್ ಅವರುಗಳಿದ್ದ ಪೀಠ ನಡೆಸಿದ್ದು, ಕೌಟುಂಬಿಕ ನ್ಯಾಯಾಲಯದ ತೀರ್ಪನ್ನು ತಳ್ಳಿ ಹಾಕಲಾಗಿದೆ. ಅಲ್ಲದೆ ವಿಚ್ಛೇದಿತ ಮಹಿಳೆ ಮತ್ತೊಂದು ಮದುವೆಯಾಗುವವರೆಗೂ ಜೀವನಾಂಶ ನೀಡುವಂತೆ ಆದೇಶಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read