ಸಂಪುಟ ವಿಸ್ತರಣೆ, ಖಾತೆ ಹಂಚಿಕೆ ಬಳಿಕ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಫೈನಲ್

ಬೆಂಗಳೂರು: ಸಂಪುಟ ವಿಸ್ತರಣೆ, ಖಾತೆ ಹಂಚಿಕೆ ಹಾಗೂ ಐದು ಗ್ಯಾರಂಟಿ ಯೋಜನೆ ಮುಗಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲಾ ಉಸ್ತುವಾರಿ ಸಚಿವರ ನೇಮಕಾತಿ ಪ್ರಕ್ರಿಯೆ ಕೈಗೊಂಡಿದ್ದಾರೆ.

ನಾಳೆ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಹೊರಬೀಳುವ ಸಾಧ್ಯತೆ ಇದೆ. ಬೆಂಗಳೂರು ಸೇರಿದಂತೆ ಕೆಲವು ಜಿಲ್ಲೆಗಳನ್ನು ಹೆಚ್ಚು ಸಚಿವರು ಪ್ರತಿನಿಧಿಸುತ್ತಿದ್ದು, ಎಲ್ಲರೂ ಸ್ವಂತ ಜಿಲ್ಲೆಯ ಉಸ್ತುವಾರಿ ನೀಡುವಂತೆ ಒತ್ತಡ ಹೇರಿದ್ದಾರೆ. ಹೀಗಾಗಿ ಪಟ್ಟಿ ಅಂತಿಮಗೊಳಿಸುವುದು ತಡವಾಗಿದ್ದು, ಬಹುತೇಕ ನಾಳೆ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ.

ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾಗಲು ಜಿ. ಪರಮೇಶ್ವರ್ ಮತ್ತು ಕೆ.ಎನ್. ರಾಜಣ್ಣ ನಡುವೆ ಪೈಪೋಟಿ ಇದೆ. ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸಚಿವರಾಗಲು ಕೆ.ಜೆ. ಜಾರ್ಜ್, ಕೃಷ್ಣ ಬೈರೇಗೌಡ, ರಾಮಲಿಂಗಾರೆಡ್ಡಿ, ದಿನೇಶ್ ಗುಂಡೂರಾವ್ ನಡುವೆ ಪೈಪೋಟಿ ಇದೆ. ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾಗಲು ಎಂ.ಬಿ. ಪಾಟೀಲ್ ಮತ್ತು ಶಿವಾನಂದ ಪಾಟೀಲ್ ನಡುವೆ ಪೈಪೋಟಿ ಇದೆ ಎಂದು ಹೇಳಲಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವರ ಸಂಭಾವ್ಯ ಪಟ್ಟಿ

ಬೆಂಗಳೂರು ಗ್ರಾಮಾಂತರ -ರಾಮಲಿಂಗಾರೆಡ್ಡಿ

ಕೋಲಾರ –ಕೆ.ಹೆಚ್. ಮುನಿಯಪ್ಪ

ಚಿಕ್ಕಬಳ್ಳಾಪುರ –ಡಾ.ಎಂ.ಸಿ. ಸುಧಾಕರ್

ರಾಮನಗರ –ಡಿ.ಕೆ. ಶಿವಕುಮಾರ್

ಬೆಂಗಳೂರು ನಗರ –ಕೆ.ಜೆ. ಜಾರ್ಜ್

ಮೈಸೂರು –ಹೆಚ್.ಸಿ. ಮಹದೇವಪ್ಪ

ಚಾಮರಾಜನಗರ -ದಿನೇಶ್ ಗುಂಡೂರಾವ್

ಕೊಡಗು –ಕೆ. ವೆಂಕಟೇಶ್

ದಕ್ಷಿಣ ಕನ್ನಡ -ಕೃಷ್ಣ ಬೈರೇಗೌಡ

ಉತ್ತರ ಕನ್ನಡ -ಮಂಕಾಳ ವೈದ್ಯ

ಉಡುಪಿ –ಜಿ. ಪರಮೇಶ್ವರ್

ತುಮಕೂರು –ಕೆ.ಎನ್. ರಾಜಣ್ಣ

ಚಿತ್ರದುರ್ಗ –ಡಿ. ಸುಧಾಕರ್

ಶಿವಮೊಗ್ಗ -ಮಧು ಬಂಗಾರಪ್ಪ

ರಾಯಚೂರು –ಎನ್.ಎಸ್. ಬೋಸರಾಜು

ವಿಜಯನಗರ -ಲಕ್ಷ್ಮಿ ಹೆಬ್ಬಾಳ್ಕರ್

ಬಾಗಲಕೋಟೆ -ಶಿವಾನಂದ ಪಾಟೀಲ್

ಯಾದಗಿರಿ -ಶರಣಬಸಪ್ಪ ದರ್ಶನಾಪುರ

ಕೊಪ್ಪಳ -ಶಿವರಾಜ್ ತಂಗಡಿಗೆ

ಹಾವೇರಿ -ಜಮೀರ್ ಅಹ್ಮದ್ ಖಾನ್

ಗದಗ –ಹೆಚ್.ಕೆ. ಪಾಟೀಲ್

ವಿಜಯಪುರ –ಎಂ.ಬಿ. ಪಾಟೀಲ್

ಬಳ್ಳಾರಿ –ಬಿ. ನಾಗೇಂದ್ರ

ಕಲಬುರ್ಗಿ -ಶರಣಪ್ರಕಾಶ ಪಾಟೀಲ

ಬೀದರ್ -ರಹಿಮ್ ಖಾನ್

ಬೆಳಗಾವಿ -ಸತೀಶ್ ಜಾರಕಿಹೊಳಿ

ಧಾರವಾಡ –ಸಂತೋಷ್ ಲಾಡ್

ದಾವಣಗೆರೆ –ಎಸ್.ಎಸ್. ಮಲ್ಲಿಕಾರ್ಜುನ

ಹಾಸನ –ಈಶ್ವರ ಖಂಡ್ರೆ

ಚಿಕ್ಕಮಗಳೂರು -ಪ್ರಿಯಾಂಕ್ ಖರ್ಗೆ

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read