ಅಮೆರಿಕದಲ್ಲಿ ಪತಿ ಸಾವು; ಮನನೊಂದ ಪತ್ನಿ ಹೈದರಾಬಾದ್​ನಲ್ಲಿ ಆತ್ಮಹತ್ಯೆ

ಹೈದರಾಬಾದ್: ಅಮೆರಿಕದಲ್ಲಿ ಪತಿಯ ಸಾವಿನಿಂದ ನೊಂದ ಮಹಿಳೆಯೊಬ್ಬರು ಗುರುವಾರ ಹೈದರಾಬಾದ್​ನ ಅಂಬರ್‌ಪೇಟ್‌ನಲ್ಲಿರುವ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅಂಬರ್‌ಪೇಟೆಯ ಡಿಡಿ ಕಾಲೋನಿ ನಿವಾಸಿ ಬಿ ಸಾಹಿತಿ (23) ಸುಮಾರು ಒಂದೂವರೆ ವರ್ಷದ ಹಿಂದೆ ಮನೋಜ್ ಎಂಬುವವರನ್ನು ವಿವಾಹವಾಗಿದ್ದರು. ಮದುವೆಯ ನಂತರ, ದಂಪತಿಗಳು ಅಮರಿಕದ ಡಲ್ಲಾಸ್‌ಗೆ ತೆರಳಿ ಮತ್ತು ಅಲ್ಲಿಯೇ ಇದ್ದರು.

ಮೇ 2 ರಂದು ಸಾಹಿತಿ ತನ್ನ ಪೋಷಕರನ್ನು ತನ್ನೊಂದಿಗೆ ಅಮೆರಿಕಕ್ಕೆ ಕರೆದುಕೊಂಡು ಹೋಗಲು ಭಾರತಕ್ಕೆ ಮರಳಿದ್ದರು. ಈ ತಿಂಗಳಾಂತ್ಯದಲ್ಲಿ ಹೊರಡುವ ವ್ಯವಸ್ಥೆ ಮಾಡುತ್ತಿದ್ದಾಗ, ಮನೋಜ್ ಮೇ 20 ರಂದು ಹೃದಯ ಸ್ತಂಭನಕ್ಕೆ ಒಳಗಾಗಿ ಆಸ್ಪತ್ರೆಗೆ ಸ್ಥಳಾಂತರಿಸುವಾಗ ನಿಧನರಾದರು.

ಮನೋಜ್ ಅವರ ಪಾರ್ಥಿವ ಶರೀರವನ್ನು ಮೇ 23 ರಂದು ಹೈದರಾಬಾದ್‌ಗೆ ತರಲಾಗಿದ್ದು, ಬುಧವಾರ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಪತಿ ಸಾವಿನ ನೋವನ್ನು ಸಹಿಸದ ಸಾಹಿತಿ ಅವರು, ತಮ್ಮ ಮನೆಯ ಬೆಡ್ ರೂಮ್ ನಲ್ಲಿ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನು ಗಮನಿಸಿದ ಕುಟುಂಬಸ್ಥರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ವೈದ್ಯರು ಆಕೆ ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read