Lok Sabha Security breach : ಸಂಸದ ಸ್ಥಾನದಿಂದ ‘ಪ್ರತಾಪ್ ಸಿಂಹ’ ವಜಾಗೊಳಿಸಿ : ಕಾಂಗ್ರೆಸ್ ಆಗ್ರಹ

ಬೆಂಗಳೂರು : ಲೋಕಸಭೆ ಭದ್ರತಾ ವೈಫಲ್ಯದ ಹಿನ್ನೆಲೆ ಸಂಸದ ಸ್ಥಾನದಿಂದ ಪ್ರತಾಪ್ ಸಿಂಹ ವಜಾಗೊಳಿಸಿ, ತನಿಖೆ ನಡೆಸಿ ಎಂದು ಕಾಂಗ್ರೆಸ್ ಆಗ್ರಹಿಸಿದೆ.

ಹಿಂದೆ 2001ರಲ್ಲಿ ಇದೇ ದಿನ ಸಂಸತ್ ಭವನದ ಮೇಲೆ ಉಗ್ರರ ದಾಳಿಯಾಗಿತ್ತು, ಆಗಲೂ ಬಿಜೆಪಿ ಆಡಳಿತವಿತ್ತು. ಈಗ ಸಂಸತ್ ಭವನದ ಒಳಗೆಯೇ ಭದ್ರತಾ ಲೋಪವಾಗಿದೆ. ಪುಲ್ವಾಮದಲ್ಲಿ ಯೋಧರನ್ನು ರಕ್ಷಿಸಲಾಗಲಿಲ್ಲ, ಸಂಸತ್ತಿನಲ್ಲಿ ಸಂಸದರನ್ನೂ ರಕ್ಷಿಸಲು ವಿಫಲವಾಗಿದೆ. ಈ ದಾಳಿಯಲ್ಲಿ ಪ್ರತಾಪ್ ಸಿಂಹರ ಹೆಸರು ಮೇಲ್ನೋಟದಲ್ಲೇ ಕಂಡುಬಂದಿದೆ.

ಸ್ಪೀಕರ್ ಓಂ ಬಿರ್ಲಾಅವರು ಕೂಡಲೇ ಪ್ರತಾಪ್ ಸಿಂಹ ಅವರನ್ನು ಈ ಕೂಡಲೇ ಸಂಸತ್ ಸದಸ್ಯ ಸ್ಥಾನದಿಂದ ವಜಾಗೊಳಿಸಿ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.

ಸಂಸತ್ತಿಗೆ ನುಗ್ಗಿದ ಘಾತುಕರು ಪಾಸ್ ಪಡೆದಿದ್ದು ಪ್ರತಾಪ್ ಸಿಂಹರಿಂದ. ಈ ದಾಳಿಕೋರರು ಪ್ರತಾಪ್ ಸಿಂಹ ಅವರ ಆಪ್ತ ವಲಯದವರೇ? ಪ್ರತಾಪ್ ಸಿಂಹರಿಂದಲೂ ಈ ದಾಳಿಯ ಷಡ್ಯಂತ್ರ ನಡೆದಿತ್ತೇ? ಈ ಎಲ್ಲಾ ಸಂಗತಿಗಳ ತನಿಖೆ ನಡೆಸಲು ಇದುವರೆಗೂ ಪ್ರತಾಪ್ ಸಿಂಹರನ್ನು ವಶಕ್ಕೆ ಪಡೆದಿಲ್ಲವೇಕೆ? ದೇಶದಲ್ಲಿ ಭದ್ರತಾ ಲೋಪವಷ್ಟೇ ಅಲ್ಲ, ತನಿಖೆಯಲ್ಲಿ ಲೋಪವೂ ನಡೆಯುತ್ತಿರುವುದೇಕೆ? ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

TAGGED:
Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read