ರಾಜ್ಯದ ಜನತೆಗೆ ಶಾಕಿಂಗ್ ನ್ಯೂಸ್: ಗಣರಾಜ್ಯೋತ್ಸವ ಪರೇಡ್ ನಲ್ಲಿ ಕರ್ನಾಟಕ ಸ್ತಬ್ಧ ಚಿತ್ರಕ್ಕೆ ಅನುಮತಿ ನಿರಾಕರಣೆ

ಬೆಂಗಳೂರು: ಜನವರಿ 26ರಂದು ನವದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಭಾಗವಹಿಸಲು ಕರ್ನಾಟಕದ ಸ್ಥಬ್ಧ ಚಿತ್ರಕ್ಕೆ ಅನುಮತಿ ನಿರಾಕರಿಸಲಾಗಿದೆ.

ದೆಹಲಿಯಲ್ಲಿ ಜನವರಿ 26ರಂದು 75ನೇ ಗಣರಾಜ್ಯೋತ್ಸವ ನಡೆಯಲಿದೆ. ಕರ್ತವ್ಯಪಥದಲ್ಲಿ ಸ್ತಬ್ಧ ಚಿತ್ರಗಳ ಮೆರವಣಿಗೆ ನಡೆಯಲಿದ್ದು, ಸತತ 14 ವರ್ಷಗಳಿಂದ ಗಣರಾಜ್ಯೋತ್ಸವ ಪರೇಡ್ ನಲ್ಲಿ ಸ್ಥಬ್ಧಚಿತ್ರ ಪ್ರದರ್ಶಿಸುತ್ತಿದ್ದ ಕರ್ನಾಟಕ 15ನೇ ಬಾರಿಗೆ ಸ್ತಬ್ದಚಿತ್ರ ಪ್ರದರ್ಶಿಸಲು ಸಿದ್ಧತೆ ಕೈಗೊಂಡಿತ್ತು. ಆದರೆ, ರಕ್ಷಣಾ ಸಚಿವಾಲಯದ ಉಸ್ತುವಾರಿಯ ಕೇಂದ್ರ ಆಯ್ಕೆ ಸಮಿತಿ ಕರ್ನಾಟಕದ ಸ್ತಬ್ಧ ಚಿತ್ರ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿದೆ.

ಈ ಮೂಲಕ ಕನ್ನಡಿಗರಿಗೆ ನಿರಾಸೆ ಮೂಡಿಸಿದ್ದು, ಈ ಬಾರಿ ರಾಜ್ಯಕ್ಕೆ ಅವಕಾಶ ನೀಡಿಲ್ಲ. ರಾಜ್ಯ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಪ್ರತಿವರ್ಷ ಗಣರಾಜ್ಯೋತ್ಸವ ಪರೇಡ್ ಗೆ ಸ್ತಬ್ಧಚಿತ್ರ ಕಳುಹಿಸಲಾಗುತ್ತದೆ. ಈ ಬಾರಿಯೂ ನಾಲ್ಕು ಸ್ತಬ್ಧ ಚಿತ್ರಗಳ ಮಾದರಿಗಳನ್ನು ಆಯ್ಕೆ ಸಮಿತಿಗೆ ಕಳುಹಿಸಲಾಗಿತ್ತು.

ಬ್ರಾಂಡ್ ಬೆಂಗಳೂರು, ನಾಲ್ವಡಿ ಕೃಷ್ಣರಾಜ ಒಡೆಯರ್, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಟರ್ಮಿನಲ್ 2, ಬೆಂಗಳೂರಿನ ಅಣ್ಣಮ್ಮ ದೇವಿ ದೇವಾಲಯದ ಮಾದರಿಗಳನ್ನು ಕಳುಹಿಸಿದ್ದು, ಯಾವ ಮಾದರಿಯನ್ನು ಒಪ್ಪದ ಆಯ್ಕೆ ಸಮಿತಿ ಕರ್ನಾಟಕಕ್ಕೆ ಪರೇಡ್ ನಿಂದಲೇ ಕೊಕ್ ನೀಡಿದೆ.

ಕಳೆದ ವರ್ಷವೂ ಅನುಮತಿ ನಿರಾಕರಿಸಿದ ಸಂದರ್ಭದಲ್ಲಿ ವಿವಾದಕ್ಕೆ ಕಾರಣವಾಗಿತ್ತು. ಆಗಿನ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಕೇಂದ್ರದ ಮನವೊಲಿಸಿ ಕರ್ನಾಟಕದ ಟ್ಯಾಬ್ಲೊಗೆ ಅವಕಾಶ ಕೊಡಿಸಿದ್ದರು. ಕೊನೆ ಕ್ಷಣದಲ್ಲಿ ನಾರಿ ಶಕ್ತಿ ಪರಿಕಲ್ಪನೆಯ ಸ್ತಬ್ಧ ಚಿತ್ರ ರೂಪಿಸಿ ಕಳಿಸಲಾಗಿತ್ತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read