ಎಲ್ಲರೆದುರೇ ನಟಿಗೆ ಕಿಸ್ ಮಾಡಿದ ನಿರ್ದೇಶಕ: ವಿಡಿಯೋ ವೀಕ್ಷಿಸಿದ ನೆಟ್ಟಿಗರಿಗೆ ಶಾಕ್

ನಟಿ ಪ್ರಿಯಾಂಕಾ ಚೋಪ್ರಾ ಅವರ ಸೋದರ‌ ಸಂಬಂಧಿ ನಟಿ ಮನ್ನಾರಾ ಚೋಪ್ರಾರನ್ನು ದಕ್ಷಿಣ ಭಾರತದ ನಿರ್ದೇಶಕ ಎ.ಎಸ್. ರವಿಕುಮಾರ್ ಚೌಧರಿ ಸಾರ್ವಜನಿಕವಾಗಿ ಚುಂಬಿಸಿರುವ ವಿಡಿಯೋ ವೈರಲ್ ಆಗಿದ್ದು, ಭಾರಿ ಟೀಕೆ ವ್ಯಕ್ತವಾಗಿದೆ.

ನಿರ್ದೇಶಕ ರವಿಕುಮಾರ್ ಮತ್ತು ನಟಿ ಮನ್ನಾರ ತಮ್ಮ ಮುಂಬರುವ ಚಿತ್ರ, ತಿರಗಬ್ಯಾಡರ ಸಾಮಿ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದರು. ಫೋಟೋಗೆ ಇಬ್ಬರೂ ಫೋಸ್ ನೀಡಿದ್ದಾರೆ. ಈ ವೇಳೆ ನಿರ್ದೇಶಕ ರವಿಕುಮಾರ್ ಹಠಾತ್ತನೆ ಮನ್ನಾರಾಗೆ ಮುತ್ತಿಟ್ಟಿದ್ದಾರೆ. ನಟಿಯ ಭುಜಕ್ಕೆ ತನ್ನ ತೋಳುಗಳನ್ನಿಟ್ಟ ನಿರ್ದೇಶಕ ರವಿಕುಮಾರ್ ನಂತರ ನಟಿಗೆ ಕಿಸ್ ಮಾಡಿದ್ದಾರೆ.

ನಿರ್ದೇಶಕ ಮುತ್ತಿಡುತ್ತಿದ್ದಂತೆಯೇ ನಟಿ ಮನ್ನಾರಾ ಆಶ್ಚರ್ಯದಿಂದ ನಕ್ಕಿದ್ದಾರೆ. ಈ ವಿಡಿಯೋವನ್ನು ಟ್ವಿಟರ್ ನಲ್ಲಿ ಹಂಚಿಕೊಳ್ಳಲಾಗಿದ್ದು, ಭಾರಿ ವೈರಲ್ ಆಗಿದೆ. ನಿರ್ದೇಶಕ ರವಿಕುಮಾರ್ ಅವರ ಈ ನಡೆಗಾಗಿ ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಟೀಕಿಸಿದ್ದಾರೆ. ಇದು ನಟಿಗೆ ಎಷ್ಟು ಮುಜುಗರವಾಗಿರಬಹುದು ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಬರೆದಿದ್ದಾರೆ.

ಇಂತಹ ಘಟನೆ ನಡೆದು ಸುದ್ದಿಯಾಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ನಟಿ ಕಾಜಲ್ ಅಗರ್ವಾಲ್ ಕೂಡ ಇದೇ ರೀತಿಯ ವರ್ತನೆಗೆ ಒಳಗಾಗಿದ್ದರು. ಛಾಯಾಗ್ರಾಹಕ ಚೋಟಾ ಕೆ ನಾಯ್ಡು ವೇದಿಕೆಯಲ್ಲಿ ಕಾಜಲ್‌ಗೆ ಮುತ್ತಿಟ್ಟ ಫೋಟೋಗಳು ವೈರಲ್ ಆಗಿದ್ದವು. ಇನ್ನು, ವೈರಲ್ ವಿಡಿಯೋಗೆ ಮನ್ನಾರಾ ಇನ್ನೂ ಪ್ರತಿಕ್ರಿಯಿಸಿಲ್ಲ.

ತಿರಗಬ್ಯಾಡರ ಸಾಮಿ ಚಿತ್ರದಲ್ಲಿ ಮನ್ನಾರ ಅಭಿನಯಿಸಿದ್ದಾರೆ. ಅಂದಹಾಗೆ, ನಟಿ ಮನ್ನಾರಾ 2014 ರಲ್ಲಿ ತೆಲುಗಿನಲ್ಲಿ ಪ್ರೇಮ ಗೀಮಾ ಜಂತ ನೈ ಚಿತ್ರದ ಮೂಲಕ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ನಂತರ ಅವರು ಜಿದ್ (2014), ಸಂದಮಾರುತಮ್ (2015) ಮತ್ತು ಜಕ್ಕಣ್ಣ (2019) ದಲ್ಲಿ ಅಭಿನಯಿಸಿದ್ರು. ಅವರು ಕೊನೆಯ ಬಾರಿಗೆ ಸೀತಾ (2019) ಚಿತ್ರದಲ್ಲಿ ಕಾಣಿಸಿಕೊಂಡರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read