ನೊಯ್ಡಾ: ಸಂಸದೆ ಡಿಂಪಲ್ ಯಾದವ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದಲ್ಲಿ ಯುವಕರ ಗುಂಪೊಂದು ಮುಸ್ಲಿಂ ಧರ್ಮಗುರುವಿನ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಮೌಲಾನಾ ಸಾಜಿದ್ ರಶೀದಿ ಹಲ್ಲೆಗೊಳಗಾದ ಧರ್ಮಗುರು ಎನ್ನಲಾಗಿದೆ. ಇತ್ತೀಚೆಗೆ ಮಸೀದಿಗೆ ಭೇಟಿ ನೀಡಿದ್ದ ಮಣಿಪುರದ ಮೈನ್ ಪುರಿಯ ಸಂಸದೆ ಡಿಂಪಲ್ ಯಾದವ್ ವಿರುದ್ಧ ಮೌಲಾನಾ ಸಾಜಿದ್ ರಶೀದಿ ಅವಹೇಳನಕಾರಿ ಹೇಳಿಕೆ ನೀಡಿದ್ದರು. ನೊಯ್ಡಾದಲ್ಲಿ ಸುದ್ದಿ ವಾಹಿನಿಯೊಂದರ ಚರ್ಚಾ ಕಾರ್ಯಕ್ರಮದಲ್ಲಿ ಭಾಗಿಯಾಗಲು ಹೋಗಿದ್ದ ರಶೀದಿ ಮೇಲೆ ಯುವಕರ ಗುಂಪೊಂದು ಏಕಾಏಕಿ ಹಲ್ಲೆ ನಡೆಸಿದೆ ಎನ್ನಲಾಗಿದೆ.
ಮೌಲಾನಾ ರಶೀದಿ ಅವರಿಗೆ ಕಪಾಳಮೋಕ್ಷ ಮಾಡಿದ್ದೇವೆ. ದೇಶದ ಯಾವುದೇ ಮಹಿಳೆ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುವವರ ವಿರುದ್ಧ ಇದೇರೀತಿ ನಾವು ನಡೆದುಕೊಳ್ಲುತ್ತೇವೆ ಎಂದು ಸಮಾಜವಾದಿ ಪಕ್ಷದ ಯುವಜನ ಸಭಾದ ರಾಜ್ಯ ಕಾರ್ಯದರ್ಶಿ ಕುಲದೀಪ್ ಭಾಟಿ ಸೋಷಿಯಲ್ ಮೀಡಿಯಾಗಳಲ್ಲಿ ಹೇಳಿಕೆ ನೀಡಿದ್ದಾರೆ.