ಪುರಾತನ ಹಿಂದೂ ದೇವಾಲಯದೊಳಗೆ ಅಶ್ಲೀಲ ವೀಡಿಯೊ ಮತ್ತು ರೀಲ್ಸ್ ಮಾಡಿದ ಘಟನೆ ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಆರೋಪಿಗಳನ್ನು ಅಮ್ರೋಹಾ ಮೂಲದ ಯೂಟ್ಯೂಬರ್‌ಗಳಾದ ದಿಲ್ಶಾದ್ ಮತ್ತು ಅಜೀಂ ಎಂದು ಗುರುತಿಸಲಾಗಿದೆ.
ಆರೋಪಿಗಳು ಪುರಾತನ ಹಿಂದೂ ದೇವಾಲಯದಲ್ಲಿ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿದ್ದಾರೆ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಶುಕ್ರವಾರದಿಂದ ಅವರ ರೀಲ್ಸ್, ವಿಡಿಯೋ ವೈರಲ್ ಆಗಲು ಶುರುವಾಗಿದೆ. ಇಬ್ಬರೂ ಮಹಿಳೆಯರ ಡ್ರೆಸ್ ನಲ್ಲಿ ವಿಡಿಯೋ ಮಾಡಿದ್ದಾರೆ.
ಆರಂಭದಲ್ಲಿ ಇದು ಹಿಂದೂ ದೇವಸ್ಥಾನದಲ್ಲಿ ತೆಗೆದ ವಿಡಿಯೋ ಎಂಬುದು ಸ್ಪಷ್ಟವಾಗಿತ್ತು. ಹೆಚ್ಚಿನ ತನಿಖೆ ವೇಳೆ, ಅಮ್ರೋಹಾ ನಗರದ ಪುರಾತನ ವಾಸುದೇವ್ ದೇವಾಲಯದಲ್ಲಿ ವಿಡಿಯೋ ಶೂಟ್ ಆಗಿದೆ ಎಂಬುದು ಗೊತ್ತಾಗಿದೆ. ಇನ್ನಷ್ಟು ತನಿಖೆ ನಡೆಸಿದಾಗ ದಿಲ್ಶಾದ್ ಮತ್ತು ಅಜೀಂ ಎಂಬುದು ಸ್ಪಷ್ಟವಾಗಿದೆ. ಪೊಲೀಸರು ಇವರಿಬ್ಬರ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ. ಇದನ್ನು ಪೊಲೀಸರು ಅಪರಾಧ ಎಂದು ಪರಿಗಣಿಸಿದ್ದಾರೆ. ಆರೋಪಿಗಳಿಬ್ಬರ ವಿರುದ್ಧ ತನಿಖೆ ಹಾಗೂ ಇತರೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ದೇವಸ್ಥಾನದ ಆವರಣದಲ್ಲಿ ಅಶ್ಲೀಲ ವಿಡಿಯೋ ರೆಕಾರ್ಡ್ ಮಾಡಿದ್ದಾರೆ.
https://twitter.com/AjayDwi65357304/status/1819603158856810664?ref_src=twsrc%5Etfw%7Ctwcamp%5Etweetembed%7Ctwterm%5E1819607008451977599%7Ctwgr%5E7e6537efa97111c7f5f824690ce6fbb9d555c351%7Ctwcon%5Es2_&ref_url=https%3A%2F%2Fm.dailyhunt.in%2Fnews%2Findia%2Fenglish%2Fopindia-epaper-dh0154614099b54a17887a83356124d409%2Futtarpradeshdilshadandazeemrecordobscenevideosinanancienthindutemplededicatedtolordkrishnainamrohabooked-newsid-n625008579