ಎಲ್.ಕೆ.ಜಿ.ಯಿಂದ 12ನೇ ತರಗತಿ ಮಕ್ಕಳ ಹಾಜರಾತಿ ಪ್ರಕ್ರಿಯೆ ಡಿಜಿಟಲೀಕರಣ

ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಪ್ರಕ್ರಿಯೆ ಡಿಜಿಟಲೀಕರಣಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ಫೇಸ್ ರೆಕಗ್ನಿಷನ್ ಅಟೆಂಡೆನ್ಸ್ ಸಿಸ್ಟಮ್ ಜಾರಿಗೆ ತೀರ್ಮಾನಿಸಲಾಗಿದೆ. ವಿದ್ಯಾರ್ಥಿಗಳಿಗೆ ನೀಡುವ ಸೌಲಭ್ಯಗಳು ದುರ್ಬಳಕೆ ಆಗದಂತೆ ತಡೆಯಲು, ಮಕ್ಕಳ ಹಾಜರಾತಿಯ ಗುಣಮಟ್ಟ ಹೆಚ್ಚಳ ಉದ್ದೇಶದಿಂದ ರಾಜ್ಯ ಸರ್ಕಾರ ಮುಖ ಗುರುತಿಸುವಿಕೆಯ ಹಾಜರಾತಿ ವ್ಯವಸ್ಥೆ ಜಾರಿಗೆ ಮುಂದಾಗಿದೆ.

ಎಲ್ಕೆಜಿಯಿಂದ 12ನೇ ತರಗತಿವರೆಗೆ ಇದು ಅನ್ವಯವಾಗಲಿದೆ. 46757 ಪ್ರಾಥಮಿಕ ಮತ್ತು ಪ್ರೌಢಶಾಲೆ, 1229 ಪಿಯು ಕಾಲೇಜುಗಳಲ್ಲಿ 45 ಲಕ್ಷಕ್ಕೂ ಅಧಿಕ ಮಕ್ಕಳು ಸರ್ಕಾರಿ ವ್ಯವಸ್ಥೆಯಲ್ಲಿ ಕಲಿಯುತ್ತಿದ್ದಾರೆ. ಈ ವರ್ಷ ಎರಡು ಲಕ್ಷ ಮಕ್ಕಳು ಸರ್ಕಾರಿ ಶಾಲೆಯಿಂದ ದೂರವಾಗಿದ್ದು, ಅವರನ್ನು ವಾಪಸ್ ಕರೆ ತರಲು ಕ್ರಮ ಕೈಗೊಳ್ಳಲಾಗಿದೆ.

ಸಮವಸ್ತ್ರ, ಶೂ, ಪಠ್ಯಪುಸ್ತಕ, ಬಿಸಿಯೂಟಗಳಿಗೆ ಸರ್ಕಾರ ಪ್ರತಿ ವರ್ಷ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದ್ದು, ದುರುಪಯೋಗ ತಡೆಯಲು ಹಾಜರಾತಿ ವ್ಯವಸ್ಥೆಯನ್ನು ಡಿಜಿಟಲೀಕರಣಗೊಳಿಸಲಾಗುವುದು. ಎಲ್ಲಾ ಶಾಲೆಗಳಿಗೂ ಆಪ್ ನೀಡಲಿದ್ದು, ಶಿಕ್ಷಕರ ಮೊಬೈಲ್ ನಲ್ಲಿ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಬೇಕು. ಮೊಬೈಲ್ ಆಪ್ ನಲ್ಲಿ ಮಕ್ಕಳ ಮುಖ ಸ್ಕ್ಯಾನ್ ಮಾಡಬೇಕು. ಮಗುವಿನ ಹಾಜರಾತಿ ಡಾಟಾಬೇಸ್ ನಲ್ಲಿ ದಾಖಲಾಗುತ್ತದೆ. ಇದರಿಂದ ಮ್ಯಾನುಯಲ್ ಹಾಜರಾತಿಯ ಸಮಯ ಉಳಿತಾಯವಾಗುತ್ತದೆ. ಹಾಜರಾತಿ ಪುಸ್ತಕ ಖರೀದಿಸುವ ಹಣವೂ ಉಳಿತಾಯವಾಗುತ್ತದೆ. ಮಕ್ಕಳ ಕೇಂದ್ರಿತ ಯೋಜನೆ ಅನುಷ್ಠಾನಗೊಳಿಸಲು ನಿಖರ ಮಾಹಿತಿ ಲಭ್ಯವಾಗುತ್ತದೆ. ಬಿಸಿಯೂಟ ಸೇರಿ ಇತರೆ ವಸ್ತುಗಳ ಕಳವು ತಡೆಯಬಹುದಾಗಿದೆ ಎನ್ನಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read