ʼವೇಟರ್‌ʼ ನಿಂದ ಇನ್‌ಸ್ಟಾಗ್ರಾಮ್‌ ʼಮುಖ್ಯಸ್ಥʼ ರಾಗುವವರೆಗೆ……. ಇಲ್ಲಿದೆ ಆಡಮ್ ಮೊಸ್ಸೆರಿ ಸ್ಪೂರ್ತಿದಾಯಕ ಕಥೆ

ಪ್ರಸ್ತುತ ಇನ್ಸ್ಟಾಗ್ರಾಮ್‌ನ ಮುಖ್ಯಸ್ಥರಾಗಿರುವ ಆಡಮ್ ಮೊಸ್ಸೆರಿ ಅವರು ಇತ್ತೀಚೆಗೆ ತಮ್ಮ ಅಪರೂಪದ ವೃತ್ತಿಜೀವನದ ಪ್ರಯಾಣವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ನಿಂದ ಅನೇಕ ನೆಟ್ಟಿಗರು ಸ್ಫೂರ್ತಿಯನ್ನು ಪಡೆದು ಪ್ರಭಾವಿತರಾಗಿದ್ದಾರೆ. ಸೋಷಿಯಲ್ ಮೀಡಿಯಾ ಥ್ರೆಡ್‌ನಲ್ಲಿ ಪೋಸ್ಟ್‌ ಒಂದನ್ನು ಹಂಚಿಕೊಂಡಿರುವ ಮೊಸ್ಸೆರಿ ತಾವು ಹೋಟೆಲ್‌ನಲ್ಲಿ ವೇಟರ್ ಆಗಿ ಕೆಲಸ ಆರಂಭಿಸಿ ಇದೀಗ ಐಟಿ ಉದ್ಯಮದಲ್ಲಿ ಪ್ರಸಿದ್ದಿ ಪಡೆದಿರುವವರೆಗಿನ ತಮ್ಮ ವೃತ್ತಿ ಜೀವನದ ಪ್ರಯಾಣದ ವಿವರವನ್ನು ಬಹಿರಂಗಪಡಿಸಿದ್ದಾರೆ.

ಮೊಸ್ಸೆರಿ ಅವರು ಇತ್ತೀಚೆಗೆ ಥ್ರೆಡ್‌ನಲ್ಲಿ ಹಾಕಿರುವ ಪೋಸ್ಟ್‌ನಲ್ಲಿ ಅವರ ಸ್ಪೂರ್ತಿದಾಯಕ ವೃತ್ತಿ ಜೀವನದ ಇತಿಹಾಸವನ್ನು ಹಂಚಿಕೊಂಡಿದ್ದಾರೆ. ಅವರ ಈ ಗಮನಾರ್ಹ ಸಾಧನೆಯು ವೇಟರ್ ಆಗುವ ಮೂಲಕ ಪ್ರಾರಂಭವಾಯಿತು. ಸಮರ್ಪಣ ಭಾವ, ಪರಿಶ್ರಮ ಮತ್ತು ಸ್ವಯಂ ಸುಧಾರಣೆ ಕೆಲಸದ ಮೇಲಿನ ಶ್ರದ್ಧೆ ಅವರನ್ನು ವಿವಿಧ ವೃತ್ತಿ ಮಾರ್ಗಗಳಲ್ಲಿ ಸಾಧನೆಯನ್ನು ಮಾಡಲು ಕಾರಣವಾಯಿತು. ಅವರು ಕ್ರಮೇಣ ಡಿಸೈನ್ ಮತ್ತು ಪ್ರಾಡಕ್ಟ್ ನಿರ್ವಹಣೆಯ ಮೂಲಕ ಜಗತ್ತಿಗೆ ಪರಿಚಯವಾದರು. ಇನ್ಸ್ಟಗ್ರಾಮ್‌ನ ಮುಖ್ಯಸ್ಥರಾಗುವ ಮೊದಲು ಫೇಸ್‌ಬುಕ್‌ನಂತಹ ಕಂಪನಿಗಳಲ್ಲಿ ಕೆಲಸ ಮಾಡಿದರು.

ಜನರು ಮೊಸ್ಸೇರಿಯವರಿಗೆ ಇದ್ದ ದೃಢಸಂಕಲ್ಪ ಮತ್ತು ಕೆಲಸದ ಬಗೆಗಿನ ಶ್ರದ್ಧೆಯನ್ನು ಶ್ಲಾಘಿಸಿದ್ದಾರೆ. ಅನೇಕರು ಅವರ ವೃತ್ತಿ ಜೀವನದ ಪ್ರಯಾಣವನ್ನು ಪ್ರೇರಣೆಯಾಗಿ ಕಂಡುಕೊಂಡಿದ್ದಾರೆ. ಇದರ ಜೊತೆಗೆ ಅನೇಕರು ತಾವು ಹೇಗೆ ಕಷ್ಟಪಟ್ಟು ಏಣಿಯನ್ನು ಏರಿ ವೃತ್ತಿ ಜೀವನದಲ್ಲಿ ಸಾಧನೆಯನ್ನು ಮಾಡಿದ್ದೇವೆ ಎಂಬುದನ್ನು ಸಹ ಹಂಚಿಕೊಂಡಿದ್ದಾರೆ. ವೇಟರ್‌ನಿಂದ ಇನ್‌ಸ್ಟಾಗ್ರಾಮ್‌ನ ಮುಖ್ಯಸ್ಥರಾಗುವವರೆಗಿನ ಮೊಸ್ಸೆರಿಯವರ ವೃತ್ತಿ ಜೀವನದ ಪ್ರಯಾಣವು ಅನೇಕರಿಗೆ ದಾರಿದೀಪವಾಗಿರೋದಂತೂ ಸತ್ಯ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read