ಕುಡಿಯುವ ನೀರಿನ ಬಾಟಲಿಯಲ್ಲಿ ಟಾಯ್ಲೆಟ್ ಸೀಟ್‌ ಗಿಂತಲೂ ಅಧಿಕ ಬ್ಯಾಕ್ಟೀರಿಯಾ…! ಅಧ್ಯಯನದಲ್ಲಿ ಶಾಕಿಂಗ್‌ ಸತ್ಯ ಬಹಿರಂಗ

ಕುಡಿಯುವ ನೀರಿನ ಪ್ಲಾಸ್ಟಿಕ್​ ಬಾಟಲಿಗಳು ನೀವು ಯೋಚಿಸುವಷ್ಟು ಸ್ವಚ್ಛವಾಗಿಲ್ಲವೆನ್ನುವುದು ನಿಮಗೆ ಗೊತ್ತೆ ? ವಾಟರ್‌ಫಿಲ್ಟರ್‌ಗುರು ಡಾಟ್‌ಕಾಮ್ ನಡೆಸಿದ ಅಧ್ಯಯನದಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ನಾವು ಬಳಸುತ್ತಿರುವ ಪರಿಸರ ಸ್ನೇಹಿ ನೀರಿನ ಬಾಟಲಿಗಳಲ್ಲಿ ಟಾಯ್ಲೆಟ್ ಸೀಟ್‌ಗಿಂತ ಹೆಚ್ಚಿನ ಬ್ಯಾಕ್ಟೀರಿಯಾ ಇರುವ ಸಾಧ್ಯತೆಯಿದೆ ಎಂದು ವರದಿ ಬಹಿರಂಗಪಡಿಸಿದೆ.

ಮರುಬಳಕೆ ಮಾಡಬಹುದಾದ ನೀರಿನ ಬಾಟಲಿಯಲ್ಲಿ ಈ ಭಯಾನಕತೆ ಅಡಗಿದೆ ಎಂದು ವರದಿ ಹೇಳಿದೆ. ಹೆಚ್ಚು ಬ್ಯಾಕ್ಟೀರಿಯಾ ತುಂಬಿದ ಸ್ಥಳವು ಬಾಟಲಿಯ ಒಳಭಾಗವಲ್ಲ, ಆದರೆ ಸ್ಪೌಟ್-ಟಾಪ್ ಮತ್ತು ಸ್ಕ್ರೂ-ಟಾಪ್ ಮುಚ್ಚಳಗಳು ಎಂದು ಅಧ್ಯಯನದಲ್ಲಿ ವಿವರಿಸಲಾಗಿದೆ.

ಅಧ್ಯಯನದ ಸಂಶೋಧಕರು ಬಹಳ ಸಂಶೋಧನೆ ನಡೆಸಿದ ಬಳಿಕ ಬಾಟಲಿಯಲ್ಲಿ ಇರುವ ಎರಡು ರೀತಿಯ ಬ್ಯಾಕ್ಟೀರಿಯಾಗಳನ್ನು ಕಂಡುಹಿಡಿದಿದ್ದಾರೆ. ಇವು ಜನರಿಗೆ ಸೋಂಕನ್ನು ಉಂಟುಮಾಡಬಹುದು ಎಂಬುದು ಖಚಿತವಾಗಿದೆ. ಮರುಬಳಕೆ ಮಾಡಬಹುದಾದ ನೀರಿನ ಬಾಟಲಿಯು ಟಾಯ್ಲೆಟ್ ಸೀಟ್‌ಗಿಂತ 40 ಸಾವಿರ ಹೆಚ್ಚು ಬ್ಯಾಕ್ಟೀರಿಯಾ CFU ಗಳನ್ನು ಹೊಂದಿದೆ. ಇದು ಪೆಟ್ ಬೌಲ್‌ಗಿಂತ 14 ಪಟ್ಟು ಹೆಚ್ಚು ಬ್ಯಾಕ್ಟೀರಿಯಾ ಮತ್ತು ಕಂಪ್ಯೂಟರ್ ಮೌಸ್‌ಗಿಂತ ಐದು ಪಟ್ಟು ಹೆಚ್ಚು ಬ್ಯಾಕ್ಟೀರಿಯಾವನ್ನು ಹೊಂದಿರುವುದಾಗಿ ಸಂಶೋಧಕರು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read