ನಿಮಗೂ ರಸ್ತೆಯಲ್ಲಿ ʼಹಣʼ ಸಿಕ್ಕಿದ್ಯಾ….? ಶಾಸ್ತ್ರದ ಪ್ರಕಾರ ಅದ್ರ ಅರ್ಥವೇನು ಗೊತ್ತಾ…….?

 

ರಸ್ತೆಯಲ್ಲಿ ಲಕ್ಷಾಂತರ ರೂಪಾಯಿ ಅಲ್ಲದೆ ಹೋದ್ರೂ ಒಂದೆರಡು ರೂಪಾಯಿಯಾದ್ರೂ ಸಾಮಾನ್ಯವಾಗಿ ಎಲ್ಲರಿಗೂ ಸಿಕ್ಕಿರುತ್ತದೆ. ರಸ್ತೆಯಲ್ಲಿ ಸಿಗುವ ಹಣಕ್ಕೂ, ಮುಂದಿನ ಭವಿಷ್ಯಕ್ಕೂ ಸಂಬಂಧವಿದೆ. ಆಗಾಗ ರಸ್ತೆಯಲ್ಲಿ ಹಣ ಸಿಗುತ್ತಿದ್ದರೆ ಮುಂದಿನ ದಿನಗಳಲ್ಲಿ ಶುಭ ಘಟನೆಗಳು ನಡೆಯುತ್ತವೆ ಎಂದರ್ಥ. ರಸ್ತೆಯಲ್ಲಿ ಹಣ ಸಿಕ್ಕರೆ ಅದ್ರ ಅರ್ಥವೇನು ಎಂಬುದನ್ನು ಶಾಸ್ತ್ರದಲ್ಲಿ ವಿವರಿಸಲಾಗಿದೆ.

ರಸ್ತೆಯಲ್ಲಿ ಅಚಾನಕ್ ಹಣ ಸಿಕ್ಕರೆ ಹೊಸತು ಅಥವಾ ಯಾವುದೋ ಒಳ್ಳೆ ಘಟನೆ ನಡೆಯಲಿದೆ ಎಂದರ್ಥ. ಇದು ನಿಮ್ಮ ಜೀವನವನ್ನು ಬದಲಿಸುವ ಸಾಧ್ಯತೆಯಿರುತ್ತದೆ. ಹೊಸ ಕೆಲಸಕ್ಕೆ ಅಥವಾ ಹೊಸ ಉದ್ಯೋಗಕ್ಕೆ ಹೊರಟಿರುವ ವೇಳೆ ದಾರಿ ಮಧ್ಯೆ ಹಣ ಸಿಕ್ಕರೆ ನಿಮ್ಮ ಕೆಲಸ ಮಂಗಳಕರವಾಗಿರಲಿದೆ ಎಂದರ್ಥ. ನಿಮ್ಮ ಕೆಲಸ ಯಶಸ್ವಿಯಾಗಲಿದೆ ಎಂದುಕೊಳ್ಳಬಹುದು.

ರಸ್ತೆಯಲ್ಲಿ ಹಣ ಸಿಕ್ಕರೆ ಅದು ನಿಮ್ಮ ಭವಿಷ್ಯದ ಉನ್ನತಿಯನ್ನು ಹೇಳುತ್ತದೆ. ಮುಂಬರುವ ದಿನಗಳಲ್ಲಿ ಯಶಸ್ಸು, ಪ್ರಗತಿ, ಗೌರವ, ಆರ್ಥಿಕ ವೃದ್ಧಿಯಾಗಲಿದೆ ಎಂಬುದರ ಸಂಕೇತ ಇದಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read