ಚಿಕ್ಕ ವಯಸ್ಸಿಗೇ ಕೂದಲು ಬೆಳ್ಳಗಾಯಿತಾ….? ಮಾಡಿ ಈ ಪರಿಹಾರ

ಇತ್ತೀಚಿನ ದಿನಗಳಲ್ಲಿ ವರ್ಷ ಮೂವತ್ತರ ಗಡಿ ದಾಟುತ್ತಿದ್ದಂತೆ ಕೂದಲು ಬೆಳ್ಳಗಾಗತೊಡಗುತ್ತದೆ. ಅದನ್ನೇ ಈಗ ಫ್ಯಾಷನ್ ಎನ್ನಲಾಗುತ್ತಿದ್ದರೂ ಚಿಕ್ಕ ವಯಸ್ಸಿನಲ್ಲೇ ಕೂದಲು ಬೆಳ್ಳಗಾದರೆ ಆಗುವ   ಮುಜುಗರ ಅಷ್ಟಿಷ್ಟಲ್ಲ.

ಅನಾರೋಗ್ಯಕರ ಜೀವನ ಶೈಲಿಯೂ ಅದಕ್ಕೊಂದು ಕಾರಣವಿರಹುದು. ಕೂದಲಿನ ಬುಡಕ್ಕೆ ಪೋಷಕಾಂಶ ಸಿಗುವ ರೀತಿ ಎಣ್ಣೆ ಮಸಾಜ್ ಮಾಡುವುದು ಬಹಳ ಮುಖ್ಯ. ತೆಂಗಿನೆಣ್ಣೆ ಅಥವಾ ಎಳ್ಳೆಣ್ಣೆಯಿಂದ ನಿತ್ಯ ತಲೆಗೆ ಮಸಾಜ್ ಮಾಡಿ. ಇದರಿಂದ ಕೂದಲು ಕಪ್ಪಾಗಿಯೂ ಬೆಳೆಯುತ್ತದೆ.

ವಿಟಮಿನ್ ಸಿ ಹೇರಳವಾಗಿರುವ ಕಿತ್ತಳೆ ಹಣ್ಣನ್ನು ತಿನ್ನಿ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಕೂದಲಿಗೆ ಪೋಷಕಾಂಶ ನೀಡುತ್ತದೆ. ಕೂದಲು ಬಿಳಿಯಾಗುವುದನ್ನು ತಪ್ಪಿಸುತ್ತದೆ.

ಪ್ರೊ ಬಯೋಟಿಕ್ಸ್ ಗುಣ ಹೊಂದಿರುವ ಮೊಸರು, ಇಡ್ಲಿ, ದೋಸೆಗಳನ್ನು ವಾರಕ್ಕೆ ಎರಡರಿಂದ ಮೂರು ಬಾರಿ ಅಥವಾ ನಿತ್ಯ ಸೇವಿಸಿ. ಇವು ದೇಹದಲ್ಲಿ ಬಯೋಟಿನ್ ಮತ್ತು ವಿಟಮಿನ್ ಡಿ ಪೋಷಕಾಂಶಗಳನ್ನು ಉತ್ಪಾದಿಸಿ ಕೂದಲಿನ ದೃಢತೆ ಮತ್ತು ಕಪ್ಪಾದ ಬಣ್ಣಕ್ಕೆ ಕಾರಣವಾಗುತ್ತವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read