ಕಳೆದು ಹೋಗಿದ್ದ 6.7 ಕೋಟಿ ರೂ. ಮೌಲ್ಯದ ವಜ್ರದುಂಗುರ ಸಿಕ್ಕಿದ್ದೆಲ್ಲಿ ಅಂತ ತಿಳಿದ್ರೆ ಅಚ್ಚರಿಪಡ್ತೀರಾ….!

Diamond Ring Worth Rs 6.7 Crore Lost In Luxury Paris Hotel Found In A...

ಪ್ಯಾರಿಸ್ ನ ಐಷಾರಾಮಿ ರಿಟ್ಜ್ ಹೋಟೆಲ್ ನಲ್ಲಿ ತಂಗಿದ್ದ ಶ್ರೀಮಂತ ಮಹಿಳಾ ಉದ್ಯಮಿಯೊಬ್ಬರು ತಾವು ಧರಿಸಿದ್ದ ಬರೋಬ್ಬರಿ 6.7 ಕೋಟಿ ರೂ. ಮೌಲ್ಯದ ವಜ್ರದ ರಿಂಗ್ ಹೋಟೆಲ್ ಕೊಠಡಿಯಲ್ಲಿಯೇ ಕಳೆದುಕೊಂಡಿದ್ದು, ಅಂತಿಮವಾಗಿ ವ್ಯಾಕ್ಯೂಮ್ ಕ್ಲೀನರ್ ನಲ್ಲಿ ಇದು ಪತ್ತೆಯಾಗಿದೆ.

ಡಿಸೆಂಬರ್ 8ರಂದು ಮಲೇಶಿಯಾ ಮೂಲದ ಈ ಮಹಿಳಾ ಉದ್ಯಮಿ ತಾವು ಹೊರಗೆ ಹೋಗುವಾಗ ವಜ್ರದ ಉಂಗುರವನ್ನು ಟೇಬಲ್ ಮೇಲೆ ಇಟ್ಟು ತೆರಳಿದ್ದರು. ಆದರೆ ವಾಪಸ್ ಬಂದಾಗ ಅದು ನಾಪತ್ತೆಯಾಗಿತ್ತು. ಹೀಗಾಗಿ ಆಕೆ ಪೊಲೀಸರಿಗೆ ದೂರು ನೀಡಿ ಹೋಟೆಲ್ ಸಿಬ್ಬಂದಿ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು.

ಇದೇ ಸಂದರ್ಭದಲ್ಲಿ ಹೋಟೆಲ್ ರಿಟ್ಜ್ ಆಡಳಿತ ಮಂಡಳಿ, ಮಹಿಳೆಗೆ ಹೆಚ್ಚುವರಿಯಾಗಿ ಮೂರು ದಿನಗಳ ಕಾಲ ತಂಗಲು ಅವಕಾಶ ಕಲ್ಪಿಸಿದ್ದು, ಇಷ್ಟಾದರೂ ಕೂಡ ವಜ್ರದ ಉಂಗುರ ಸಿಕ್ಕಿರಲಿಲ್ಲ. ಅಂತಿಮವಾಗಿ ನಿರಾಸೆಯಿಂದ ಮಹಿಳೆ ಲಂಡನ್ ಗೆ ತೆರಳಿದ್ದು, ಹೋಟೆಲ್ ಸಿಬ್ಬಂದಿ ತಪಾಸಣೆ ನಡೆಸಿದಾಗ ವ್ಯಾಕ್ಯೂಮ್ ಕ್ಲೀನರ್ ನಲ್ಲಿ ವಜ್ರದ ಉಂಗುರ ಪತ್ತೆಯಾಗಿದೆ. ಇದೀಗ ಮಹಿಳೆ ಇದನ್ನು ಪಡೆಯಲು ಲಂಡನ್ನಿಂದ ಪ್ಯಾರಿಸ್ ಗೆ ಮರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read