ಬೆಂಗಳೂರು: ನಟ ಧ್ರುವ ಸರ್ಜಾ ವಿರುದ್ಧ ನಿರ್ದೇಶಕ ರಾಘವೇಂದ್ರ ಹೆಗಡೆ ವಂಚನೆ ಪ್ರಕರಣ ದಾಖಲಿಸಿರುವ ಬೆನ್ನಲ್ಲೇ ಧ್ರುವ ಸರ್ಜಾ ಆಪ್ತರು ರಾಘವೇಂದ್ರ ಹೆಗಡೆ ಆರೋಪ ಸುಳ್ಳು. ತಮಿಳು, ತೆಲುಗಿನಲ್ಲಿ ಸಿನಿಮಾ ಮಾಡಲು ಧ್ರುವ ಒಪ್ಪದಿದ್ದಾಗ ನಿರ್ದೇಶಕರು ಈ ರೀತಿ ಆರೋಪ ಮಾಡಿದ್ದಾರೆ ಎಂಬ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ನಿರ್ದೇಶಕ ರಾಘವೇಂದ್ರ ಹೆಗಡೆ ಧ್ರುವ ಆಪ್ತರ ವಿರುದ್ಧ ಕಿಡಿಕಾರಿದ್ದಾರೆ.
ತನ್ನನ್ನು ಕನ್ನಡ ವಿರೋಧಿ ಎಂದು ಬಿಂಬಿಸುತ್ತಿರುವುದಾಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾನು ಕನ್ನಡದಲ್ಲಿಯೇ ಸಿನಿಮಾ ಹಾಗೂ ಸಿರೀಯಲ್ ಗಳನ್ನು ನಿರ್ದೇಶನ ಮಾಡಿದ್ದೇನೆ ಇಂತಹ ಹೇಳಿಕೆಗಳು ಸರಿಯಲ್ಲ ಎಂದಿದ್ದಾರೆ.
ನಾನು ಕನ್ನಡದಲ್ಲ್ಲೆ ಜಗ್ಗುದಾದಾ ಸಿನಿಮಾ, ಶನಿ ಸೀರಿಯಲ್, ಮಹಾಕಾಳಿ ಸಿರಿಯಲ್ ಮಾಡಿದ್ದೆ. ಎರಡನೇ ಸಿನಿಮಾ ಧ್ರುವ ಸರ್ಜಾ ಅವರಿಗೆ ಮಾಡಬೇಕಿತ್ತು. ಕೆಡಿ ಮುಗಿಸಬೇಕು ಅಂತಾ ಕೇಳಿಕೊಂಡಿದ್ದರು. ಆಯ್ತು ಅಂತ 8 ವರ್ಷ ಕಾದಿದ್ದೇನೆ. ಒಂದು ಬಾರಿ ಅರ್ಜುನ್ ಸರ್ಜಾ ಹಾಗೂ ಧ್ರುವ ಸರ್ಜಾ ಸಮ್ಮುಖದಲಿ ಕನ್ನಡ ಸಿನಿಮಾ ಮಾಡ್ತೀನಿ ಎಂದಿದ್ದೆ. ಅವರು ಪ್ಯಾನ್ ಇಂಡಿಯಾ ಸಿನಿಮಾ ಮಾಡ್ತಿದ್ದೀವಿ. ಕೆಲ ದಿನ ಕಳೆದ ನಂತರ ಮಾಡಿ ಎಂದರು. ಕಾನೂನು ಪ್ರಕಾರ ನನ್ನ ಹಣ ವಾಪಸ್ ಕೊಡಿ ಎಂದು ಕೇಳಿದ್ದೆ. ನಂತರ ನೋಟಿಸ್ ಕಳಿಸಿದೆ ಎಂದಿದ್ದಾರೆ.
ನಾನು ತೆಲುಗು ಅಥವಾ ತಮಿಳು ಸಿನಿಮಾ ಮಾಡುವುದಾಗಿದ್ದರೆ ತೆಲುಗು, ತಮಿಳು ನಟರಿಗೆ ಸಿನಿಮಾ ಮಾಡ್ತಿದ್ದೆ. ನಾನು ಕರಾವಳಿಯವನು. ನನ್ನ ಮಾತೃ ಭಾಷೆ ಕನ್ನಡ. ಹಾಗಾಗಿ ಕನ್ನಡದಲ್ಲಿ ಸಿನಿಮಾ ಮಾಡುವುದಾಗಿಯೇ ಹೇಳಿದ್ದೆ ಎಂದು ಸ್ಪಷ್ಟಪಡಿಸಿದ್ದಾರೆ.