ಬೆಂಗಳೂರು: ನಟ ಧ್ರುವ ಸರ್ಜಾ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ. ಧ್ರುವ ಸರ್ಜಾ, ಅವರ ಮ್ಯಾನೇಜರ್ ಹಾಗೂ ಫ್ಯಾನ್ಸ್ ವಿರುದ್ಧ ಬೆಂಗಳೂರಿನ ಬನಶಂಕರಿ ಠಾಣೆಯಲ್ಲಿ ದೂರು ದಾಖಲಾಗಿದೆ.
ನಟ ಧ್ರುವ ಸರ್ಜಾ ಅವರಿಂದ ಅಕ್ಕಪಕ್ಕದ ನಿವಾಸಿಗಳಿಗೆ ತೊಂದರೆಯಾಗುತ್ತಿದೆ. ಪ್ರತಿದಿನ ನಮ್ಮ ಮನೆಯ ಮುಂದೆ ಧ್ರುವ ಸರ್ಜಾ ಅಭಿಮಾನಿಗಳು ಬೈಕ್ , ಕಾರುಗಳನ್ನು ತಂದು ಪಾರ್ಕ್ ಮಾಡುತ್ತಿದ್ದಾರೆ. ಗುಂಪುಗೂಡುವುದು, ಮನೆಯ ಗೋಡೆಗಳಿಗೆ ಉಗುಳುವುದು ಮಾಡುತ್ತಿದ್ದಾರೆ. ಇದರಿಂದಾಗಿ ಧ್ರುವಸರ್ಜಾ ಅಕ್ಕ-ಪಕ್ಕದ ಮನೆಯವರಿಗೆ ತೊಂದರೆಯಾಗುತ್ತಿದೆ. ಕಿರಿಕಿರಿಯುಂಟಾಗುತ್ತಿದೆ ಎಂದು ದೂರು ನೀಡಲಾಗಿದೆ.
ಮನೋಜ್ ಎಂಬುವವರು ಬನಶಂಕರಿ ಠಾಣೆಯಲ್ಲಿ ದೂರು ನೀಡಿದ್ದು, ನಟ ಧ್ರುವ ಸರ್ಜಾ, ಅವರ ಮ್ಯಾನೇಜರ್, ಕಾರು ಚಾಲಕ ಹಾಗೂ ಫ್ಯಾನ್ಸ್ ವಿರುದ್ಧ ಎನ್ ಸಿಆರ್ ದಾಖಲಾಗಿದೆ.
