ಹಿರಿಯ ನಟ ಧರ್ಮೇಂದ್ರ ಅವರು ಜನವರಿ 21 ರಂದು ಟ್ವಿಟರ್‌ನಲ್ಲಿ ವ್ಯಕ್ತಿಯೊಬ್ಬರು ಸ್ಕೆಚ್ ಮಾಡುವ ವಿಡಿಯೋ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ. ಕಲಾವಿದರು ಶೋಲೆ ಚಿತ್ರದ ಅಪ್ರತಿಮ ಜೋಡಿಯಾದ ಜೈ ಮತ್ತು ವೀರು ಅವರ ರೇಖಾಚಿತ್ರವನ್ನು ರಚಿಸಿದ್ದು, ಇದಕ್ಕೆ ನಟ ಧರ್ಮೇಂದ್ರ ಪ್ರಭಾವಿತರಾಗಿದ್ದಾರೆ.
ಕಿರು ವಿಡಿಯೋದಲ್ಲಿ ಕಲಾವಿದನು ಅಪ್ರತಿಮ ಕೌಶಲದಿಂದ ಪೆನ್ಸಿಲ್ನೊಂದಿಗೆ ಸ್ಕೆಚ್ ಮಾಡಲು ಪ್ರಾರಂಭಿಸಿದ್ದಾರೆ. ಅವರು ಮೊದಲು ಧರ್ಮೇಂದ್ರ ನಿರ್ವಹಿಸಿದ ವೀರುವನ್ನು ಚಿತ್ರಿಸಿದ್ದಾರೆ. ನಂತರ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಅವರು ನಿರ್ವಹಿಸಿದ ಜೈ ಪಾತ್ರವನ್ನು ಸ್ಕೆಚ್ ಮೂಲಕ ಬಿಡಿಸಿದ್ದಾರೆ.
ವೀರೂವನ್ನು ಹೆಗಲ ಮೇಲೆ ಹೊತ್ತುಕೊಂಡು ಜೈ ಸೈಕಲ್ ಸವಾರಿ ಮಾಡುತ್ತಿದ್ದ ಚಿತ್ರವನ್ನು ಕಲಾವಿದರು ಮರುಸೃಷ್ಟಿಸಿದ್ದಾರೆ.” ನಿನ್ನನ್ನು ಪ್ರೀತಿಸುತ್ತೇನೆ ಮತ್ತು ನಿನ್ನ ಪೆನ್ಸಿಲ್‌ಗೆ ನಮಸ್ಕಾರ ಮಾಡುತ್ತೇನೆ. ಪ್ರಾಮಾಣಿಕ ಸ್ನೇಹ ಯಾವಾಗಲೂ ನೆನಪಿನಲ್ಲಿ ಉಳಿಯುತ್ತದೆ” ಎಂದು ಧರ್ಮೇಂದ್ರ ಪೋಸ್ಟ್‌ಗೆ ಶೀರ್ಷಿಕೆ ಕೊಟ್ಟಿದ್ದು, ಇದು ನೆಟ್ಟಿಗರ ಮನಸ್ಸು ಗೆದ್ದಿದೆ.
Love 💕 you and salute to your pencil ✏️🙏 A sincere friendship will always be remembered ☘️☘️☘️☘️☘️💝 pic.twitter.com/9pYonuJSUE
— Dharmendra Deol (@aapkadharam) January 21, 2023
अरे वाह, खुबसुरत पेन्सिल स्केच 💖💖
— Uma Mainali (@MainaliUma) January 21, 2023
Beautiful 💞
— Shiv Singh Aujla (@shiv_k_singh) January 21, 2023