ಧರ್ಮಸ್ಥಳ: ಧರ್ಮಸ್ಥಳದ ವಿರುದ್ಧ ಅಪ್ರಪ್ರಚಾರ, ಷಡ್ಯಂತ್ರ ಖಂಡಿಸಿ ಧರ್ಮಸ್ಥಳ ಚಲೋ, ಧರ್ಮಸ್ಥಳದಲ್ಲಿ ಬೃಹತ್ ಸಮಾವೇಶ ನಡೆಸಿದ್ದ ಬಿಜೆಪಿ ನಾಯಕರು ಇದ್ದಕ್ಕಿದ್ದಂತೆ ಸೌಜನ್ಯ ನಿವಾಸಕ್ಕೆ ದಿಢೀರ್ ಭೇಟಿ ನೀಡಿದ್ದಾರೆ.
ಧರ್ಮಸ್ಥಳದಲ್ಲಿ ಬೀಡುಬಿಟ್ಟಿದ್ದ ಬಿಜೆಪಿ ನಾಯಕರು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಶಾಸಕ ಹರೀಶ್ ಪೂಂಜಾ ಸೇರುದಂತೆ ಹಲವು ನಾಯಕರು ಸೌಜನ್ಯಾ ನಿವಾಸಕ್ಕೆ ಭೇಟಿ ನೀಡಿ, ಅವರ ತಾಯಿ ಹಾಗೂ ಕುಟುಂಬದ ಜೊತೆ ಮಾತುಕತೆ ನಡೆಸಿದರು.
ಬಿಜೆಪಿ ನಾಯಕರ ಈ ನಡೆಗೆ ಸ್ವಪಕ್ಷದಲ್ಲಿಯೇ ಆಕ್ಷೇಪ ವ್ಯಕ್ತವಾಗಿದೆ. ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಖಂಡಿಸಿ ಹೋರಾಟ ನಡೆಸುತ್ತಿರುವ ಪಕ್ಷದ ನಾಯಕರೇ ಈಗ ಏಕಾಏಕಿ ಸೌಜನ್ಯ ನಿವಾಸಕ್ಕೆ ಭೇಟಿ ಕೊಡುವ ಅಗತ್ಯವೇನಿತ್ತು? ಎಸ್ ಐಟಿ ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿ ಅದೂ ಕೂಡ ಧರ್ಮಸ್ಥಳ ಕಾರ್ಯಕ್ರಮದಲ್ಲಿ ಸೌಜನ್ಯ ನಿವಾಸಕ್ಕೆ ಭೇಟಿ ನೀಡುವುದು ನಿಗದಿಯೇ ಆಗಿರಲಿಲ್ಲ. ಕೊನೇ ಕ್ಷಣದಲ್ಲಿ ದಿಢೀರ್ ಬೆಟಿ ನೀಡುವ ಅವಶ್ಯಕತೆಯೇನಿತ್ತು ಎಂದು ಬಿಜೆಪಿಯ ಕೆಲ ನಾಯಕರು ಪ್ರಶ್ನಿಸಿದ್ದಾರೆ. ಅಲ್ಲದೇ ಕೆಲ ನಾಯಕರು ಬೆಂಗಳೂರಿಗೆ ವಾಪಸ್ ಆಗಿದ್ದಾರೆ.