ಮೈಸೂರು: ಧರ್ಮಸ್ಥಳ ಪ್ರಕರಣದ ತನಿಖೆಗೆ ಎಸ್ ಐಟಿ ರಚನೆ ಮಾಡಿರುವ ಸರ್ಕಾರದ ಕ್ರಮ ಟೀಕಿಸುತ್ತಿರುವ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಸತ್ಯ ಹೊರಬರಬೇಕು ಎಂಬ ಕಾರಣಕ್ಕೆ ಎಸ್ ಐಟಿ ರಚನೆ ಮಾಡಿ ತನಿಖೆಗೆ ಆದೇಶ ನೀಡಿದ್ದೇವೆ ಎಂದಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಧರ್ಮಸ್ಥಳ ವಿಚಾರದಲ್ಲಿ ಎಸ್ ಐಟಿ ರಚನೆ ಮಾಡಿದ್ದನ್ನು ಸ್ವತಃ ಢರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರೇ ಸ್ವಾಗತಿಸಿದ್ದಾರೆ. ಸತ್ಯ ಹೊರಬರಬೇಕು. ಇಲ್ಲವಾದಲ್ಲಿ ಯಾವಾತ್ತೂ ಧರ್ಮಸ್ಥಳದ ಮೇಲೇ ತೂಗುತತ್ತಿ ಇರುತ್ತದೆ. ಅನುಮಾನ, ಸಂದೇಹ ಹೋಗಲಾಡಿಸಬೇಕು ಎಂಬ ಕಾರಣಕ್ಕೆ ಎಸ್ ಐಟಿ ರಚಿಸಿದ್ದೇವೆ ಎಂದು ಹೇಳಿದರು.
ಬಿಜೆಪಿ, ಜೆಡಿಎಸ್ ನವರು ಬರೀ ರಾಜಕೀಯ ಮಾಡುತ್ತಿದ್ದಾರೆ. ಅವರು ಯಾತ್ರೆ ಹೋದರೆ ಹೋಗಲಿ ಪಾಪ. ರಾಜಕೀಯ ಮಾಡಲು ಯಾತ್ರೆ ಮಾಡುತ್ತಿದ್ದಾರೆ. ಈ ಹಿಂದೆ ಎಸ್ ಐಟಿ ರಚನೆ ಮಾಡಿದ್ದನ್ನು ಬಿಜೆಪಿಯವರೇ ಸ್ವಾಗತಿಸಿದ್ದರು. ಈಗ ರಾಜಕೀಯ ಉದ್ದೇಶಕ್ಕೆ ಮಾತನಾಡುತ್ತಿದ್ದಾರೆ. ಬಿಜೆಪಿಯವರಿಗೆ ಧರ್ಮನೂ ಗೊತ್ತಿಲ್ಲ, ಜಾತಿಯೂ ಗೊತ್ತಿಲ್ಲ ಸುಮ್ಮನೇ ರಾಜಕೀಯ ಮಾಡಬೇಕೆಂದು ಮಾತನಾಡುತ್ತಾರೆ ಎಂದು ಕಿಡಿಕಾರಿದರು.