ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದಾಗಿ ತಪ್ಪೊಪ್ಪಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಯಿಂಟ್ 1ರಲ್ಲಿ ಸಿಕ್ಕಿದ್ದ ಪಾನ್ ಕಾರ್ಡ್ ಯಾರದ್ದು ಎಂಬುದು ಪತ್ತೆಯಾಗಿದೆ.
ಧರ್ಮಸ್ಥಳದ ನೇತ್ರಾವತಿ ನದಿ ತೀರದಲ್ಲಿ ನೂರಾರು ಶವ ಹೂತಿಟ್ಟಿದ್ದಾಗಿ ದೂರುದಾರ ನೀಡಿರುವ ಮಾಹಿತಿ ಮೇರೆಗೆ ಆತ ತೋರಿಸಿದ ಜಾಗಗಳಲ್ಲಿ ಶೋಧಕಾರ್ಯನಡೆಸಲಾಗುತ್ತಿದೆ. ಶೋಧಕಾರ್ಯಾಚರಣೆ ವೇಳೆ ಪಾಯಿಂಟ್ 1ರಲ್ಲಿ ಸಿಕ್ಕಿರುವ ಪಾನ್ ಕಾರ್ಡ್, ಡೆಬಿಟ್ ಕಾರ್ಡ್ ಗಳ ವಾರಸುದಾರ ಯಾರೆಂಬುದು ಗೊತ್ತಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್ ಪೇಟೆಯ ವೀರಸಾಗರ ನಿವಾಸಿ ಸುರೇಶ್ ಅವರ ಪಾನ್ ಕಾರ್ಡ್, ಡೆಬಿಟ್ ಕಾರ್ಡ್ ಎಂದು ಗೊತ್ತಾಗಿದೆ. ಸುರೇಶ್ ಗಂಗಮರಿಯಪ್ಪ ಹಾಗೂ ಸಿದ್ದಲಕ್ಷ್ಮಮ್ಮ ಅವರ ಪುತ್ರ. ಮಾರ್ಚ್ ತಿಂಗಳಿನಲ್ಲಿ ಜಾಂಡೀಸ್ ನಿಂದ ಸುರೇಶ್ ಮೃತಪಟ್ಟಿದ್ದಾರೆ. ಎರಡು ವರ್ಷಗಳ ಹಿಂದೆ ವೀರಸಾಗರದ ಸುರೇಶ್ ಮನೆಬಿಟ್ಟು ಹೋಗಿದ್ದರು. ಮಾರ್ಚ್ ನಲ್ಲಿ ಜಾಂಡೀಸ್ ನಿಂದ ಸಾವನ್ನಪ್ಪಿದ್ದರು. ಕುಟುಂಬದವರೇ ಸೇರಿ ಮೃತದೇಹದ ಅಂತ್ಯಸಂಸ್ಕಾರ ನೆರವೇರಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಸುರೇಶ್ ಆಗಾಗ ಧರ್ಮಸ್ಥಳಕ್ಕೆ ಹೋಗುತ್ತಿದ್ದರು. ಈ ವೇಳೆ ಅವರ ಪರ್ಸ್ ಕಳೆದು ಹೋಗಿರಬಹುದು. ಸುರೇಶ್ ಪರ್ಸ್ ಕಳೆದುಕೊಂಡಿದ್ದ ಎಂಬ ಬಗ್ಗೆ ನಮಗೆ ಗೊತ್ತೇ ಇರಲಿಲ್ಲ ಎಂದು ಕುಟುಬದ ಸದಸ್ಯರು ತಿಳಿಸಿದ್ದಾರೆ.