ಮಂಗಳೂರು: ಧರ್ಮಸ್ಥಳ ಬುರುಡೆ ಪ್ರಕರಣ ರೋಚಕ ತಿರುಪು ಪಡೆದುಕೊಂಡಿದೆ. ಧರ್ಮಸ್ಥಳದ ಹಲವೆಡೆ ಶವಗಳನ್ನು ಹೂತಿಟ್ಟಿರುವುದಾಗಿ ಹೇಳಿದ್ದ ಮಾಸ್ಕ್ ಮ್ಯಾನ್ ಆರೋಪಿ ಚಿನ್ನಯ್ಯ ಎಸ್ ಐಟಿ ವಿಚಾರಣೆ ವೇಳೆ ಹಲವು ಸ್ಫೋಟಕ ಮಾಹಿತಿ ಬಾಯ್ಬಿಟ್ಟಿದ್ದಾನೆ.
ತನಗೆ ಬುರುಡೆ ತಂದುಕೊಟ್ಟಿದ್ದೇ ಸೌಜನ್ಯಾ ಮಾವ ವಿಠಲಗೌಡ ಎಂದು ವಿಚಾರಣೆ ವೇಳೆ ಹೇಳಿದ್ದಾನೆ ಎಂದು ತಿಳಿದುಬಂದಿದೆ. ಇದರ ಬೆನ್ನಲ್ಲೇ ವಿಠಲ ಗೌಡನನ್ನು ವಶಕ್ಕೆ ಪಡೆದ ಎಸ್ ಐಟಿ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದ್ದಾರೆ. ಮತ್ತೊಂದೆಡೆ ಬುರುಡೆ ಗ್ಯಾಂಗ್ ನ ಗಿರೀಶ್ ಮಟ್ಟಣ್ಣವರ್ ಅವರನ್ನೂ ಎಸ್ ಐಟಿ ವಿಚಾರಣೆ ನಡೆಸಿದೆ. ಈ ವೇಳೆ ಗಿರೀಶ್ ಮಟ್ಟಣ್ಣವರ್ ಬುರುಡೆ ರಹಸ್ಯ ಬಾಯ್ಬಿಟ್ಟಿದ್ದಾನೆ.
ಕಾಡಿನಿಂದ ಬುರುಡೆ ತಂದುಕೊಟ್ಟಿದ್ದೇ ಸೌಜನ್ಯಾ ಮಾವ ವಿಠಲ ಗೌಡ. ಬಂಗ್ಲಗುಡ್ಡದ ಕಾಡಿನಿಂದ ಬುರುಡೆ ತಂದಿದ್ದಾಗಿ ವಿಠಲ ಗೌಡ ಹೇಳಿದ್ದ. ಈ ಹಿನ್ನೆಲೆಯಲ್ಲಿ ಬಂಗ್ಲಗುಡ್ಡದ ಯಾವ ಸ್ಥಳದಿಂದ ವಿಠಲ ಗೌಡ ಬುರುಡೆ ತಂದಿದ್ದಾನೆ ಎಂಬುದನ್ನು ಪರಿಶೀಲಿಸಿರುವ ಅಧಿಕಾರಿಗಳು ಬುರುಡೆ ಸಿಕ್ಕ ಸ್ಥಳದಲ್ಲಿದ್ದ ಮಣ್ಣನ್ನು ಸಂಗ್ರಹಿಸಿ ಎಫ್ ಎಸ್ ಎಲ್ ಗೆ ರವಾನಿಸಿದ್ದಾರೆ.