ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐಟಿ ಅಧಿಕಾರಿಗಳು ದೂರುದಾರ ತೋರಿದ್ದ ಮಹತ್ವದ ಸ್ಥಳ 13ನೇ ಪಾಯಿಂಟ್ ನಲ್ಲಿ ಕೊನೆಗೂ ಶೋಧ ಕಾರ್ಯ ಆರಂಭಿಸಿದೆ.
ದೂರುದಾರ ತೋರಿರುವ 13ನೇ ಪಾಯಿಂಟ್ ನಲ್ಲಿ ಇಂದು ಎಸ್ ಐಟಿ ಅಧಿಕಾರಿಗಳ ತಂಡ ಅಸ್ಥಿಪಂಜರಕ್ಕಾಗಿ ಶೋಧಕಾರ್ಯಾಚರಣೆ ಆರಂಭಿಸಿದೆ. ಡ್ರೋನ್ ಮೌಂಟೆಡ್ ಜಿಪಿಆರ್ ಬಳಸಿ ಎಸ್ ಐಟಿ ತಂಡ ಅಸ್ಥಿಪಂಜರಗಳಿಗಾಗಿ ಶೋಧಕಾರ್ಯಾಚರಣೆ ನಡೆಸುತ್ತಿದೆ.
ಈ ಜಾಗದಲ್ಲಿ ಹಲವು ಶವಗಳನ್ನು ಹೂತಿದ್ದಾಗಿ ದೂರುದಾರ ಮಾಸ್ಕ್ ಮೆನ್ ಹೇಳಿಕೆ ನೀಡಿದ್ದು, ಈ ಹಿನ್ನೆಲೆಯಲ್ಲಿ 13ನೇ ಪಾಯಿಂಟ್ ಶೋಧಕಾರ್ಯ ಇಡೀ ಪ್ರಕರಣದಲ್ಲಿ ಮಹತ್ವ ಪಡೆದುಕೊಂಡಿದೆ.