ಮಂಗಳೂರು: ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐಟಿ ತನಿಖೆ ಚುರುಕುಗೊಳಿಸಿದೆ. ಒಂದೆಡೆ ದೂರುದಾರ ತಿಳಿಸಿರುವ ಸ್ಥಳದಲ್ಲಿ ಸ್ಥಳಮಹಜರು ನಡೆಸಿ ಶವಗಳಿಗಾಗಿ ಶೋಧ ಕಾರ್ಯ ನಡೆಸುತ್ತಿದೆ. ಮತ್ತೊಂದೆಡೆ ಧರ್ಮಸ್ಥಳ ಠಾಣೆಯಲ್ಲಿ ಕಾರ್ಯನಿರ್ವಹಿಸಿದ ಪೊಲೀಸರ ಪಟ್ಟಿ ನೀಡುವಂತೆ ಕೇಳಿದೆ.
1995ರಿಂದ ಈವರೆಗೆ ಧರ್ಮಸ್ಥಳ ಔಟ್ ಪೋಸ್ಟ್ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡಿದವರ ಪಟ್ಟಿ ನಿಡುವಂತೆ ದಕ್ಷಿಣ ಕನ್ನಡ ಜಿಲ್ಲಾ ಎಸ್ ಪಿಗೆ ಎಐ ಟಿ ಮನವಿ ಮಾಡಿದೆ.
ಇನ್ನೊಂದೆಡೆ ಶವ ಹೂತಿಟ್ಟ ಸ್ಥಳ ಎಂದು ದೂರುದಾರ ತೋರಿಸಿರುವ ಸ್ಥಳದಲ್ಲಿ ಎರಡನೇ ದಿನವಾದ ಇಂದು ಎಸ್ ಐಟಿ ತಂಡ ಶೋಧ ಕಾರ್ಯ ನಡೆಸಿದೆ. 30 ಸಿಬ್ಬಂದಿ, 20 ಪೌರಕಾರ್ಮಿಕರಿಂದ ಕಾರ್ಯಾಚರಣೆ ಅನ್ಡೆಸಲಾಗುತ್ತಿದೆ.