BIG NEWS: ಬಾಲಕರ ಕಿಡ್ನ್ಯಾಪ್ ಕೇಸ್ ಗೆ ಬಿಗ್ ಟ್ವಿಸ್ಟ್: ಟ್ಯೂಷನ್, ಹೋಂ ವರ್ಕ್ ತಪ್ಪಿಸಿಕೊಳ್ಳಲು ಕಥೆ ಕಟ್ಟಿದ್ದ ಬಾಲಕರು

ಚಿತ್ರದುರ್ಗ: ಧರ್ಮಪುರ ಬಳಿ ಬಾಲಕರ ಕಿಡ್ನ್ಯಾಪ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಹೋಂ ವರ್ಕ್, ಟ್ಯೂಷನ್ ಕ್ಲಾಸ್ ಗಳಿಂದ ತಪ್ಪಿಸಿಕೊಳ್ಳಲು ಇಬ್ಬರು ಬಾಲಕು ಕಿಡ್ನ್ಯಾಪ್ ಆಗಿದ್ದ ಕಥೆ ಕಟ್ಟಿದ್ದರು ಎಂಬುದು ಪೊಲೀಸರ ವಿಚಾರಣೆ ವೇಳೆ ಬಯಲಾಗಿದೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಧರ್ಮಪುರ ಗ್ರಾಮದಲ್ಲಿ ಇಬ್ಬರು ಬಾಲಕರು ಕಿಡ್ನ್ಯಾಪ್ ಆಗಿದ್ದ ಪ್ರಕರಣ ದಾಖಲಾಗಿತ್ತು. ಕಾರ್ಯಾಚರಣೆ ನಡೆಸಿದ ಪೊಲೀಸರು ಇಬ್ಬರು ಬಾಲಕರನ್ನು ರಕ್ಷಿಸಿದ್ದರು. ಓಮ್ನಿಯಲ್ಲಿ ಬಂದ ಮುಸುಕುಧಾರಿಗಳು ನಮ್ಮನ್ನು ಕಿಡ್ನ್ಯಾಪ್ ಮಾಡಿದ್ದಾಗಿ ಹೇಳಿದ್ದರು. ಅಪಹರಣಕಾರರು ಹಿಂದಿಯಲ್ಲಿ ಮಾತನಾಡುತ್ತಿದ್ದರು. ಈ ಬಾಲಕರಲ್ಲ ಎಂದು ಕರೆ ಬಂದಾಗ ನಮ್ಮನ್ನು ಬಿಟ್ಟು ಕಳುಹಿಸಿದ್ದಾರೆ ಎಂದು ಸುಳ್ಳು ಹೇಳಿದ್ದರು.

ಬಾಲಕರನ್ನು ವಿಚಾರಣೆ ನಡೆಸಿದಾಗ ಇಬ್ಬರು ಬಾಲಕರು ಟ್ಯೂಷನ್ ಕ್ಲಾಸ್ ಹಾಗೂ ಹೋಂ ವರ್ಕ್ ನಿಂದ ತಪ್ಪಿಸುಕೊಳ್ಳಲು ಅಪಹರಣದ ಕಥೆ ಕಟ್ಟಿರುವುದು ಬೆಳಕಿಗೆ ಬಂದಿದೆ.

 

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read