ಖ್ಯಾತ ತಮಿಳು ನಟ ಧನುಷ್ ತಮ್ಮ ಅಸಿಸ್ಟಂಟ್ ಮದುವೆಗೆ ಸಪ್ರೈಸ್ ವಿಸಿಟ್ ನೀಡುವ ಮೂಲಕ ಸುದ್ದಿಯಲ್ಲಿದ್ದಾರೆ. ತನ್ನ ಮದುವೆಗೆ ಧನುಷ್ ಆಗಮಿಸಿದ್ದನ್ನು ಕಂಡು ವರ ಆನಂದ್ ಸಂತೋಷಕ್ಕೆ ಪಾರವೇ ಇರಲಿಲ್ಲ. ನೂತನ ವಧು – ವರರಿಗೆ ಧನುಷ್ ಶುಭಾಶಯ ಕೋರಿದ್ದು, ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನಟ ಧನುಷ್ ನೀಲಿ ಬಣ್ಣದ ಟೋಪಿ ಹಾಗೂ ನೀಲಿ ಬಣ್ಣದ ಜೀನ್ಸ್ನಲ್ಲಿ ಗಮನ ಸೆಳೆದಿದ್ದಾರೆ. ಇನ್ನು ಧನುಷ್ ಜೊತೆಯಲ್ಲಿ ಮತ್ತೋರ್ವ ನಟ ಕೆನ್ ಕರುಣಾಸ್ ಕೂಡ ಆಗಮಿಸಿದ್ದರು. ಫೋಟೋಗಳಲ್ಲಿ ಧನುಷ್ ವಧು – ವರರಿಗೆ ಹಸ್ತಲಾಘವ ಮಾಡಿದ್ದಾರೆ.
ನಟ ಧನುಷ್ರ ಈ ಸರಳ ನಡೆಯನ್ನು ಅಭಿಮಾನಿಗಳು ಕೊಂಡಾಡಿದ್ದಾರೆ. ನೆಟ್ಟಿಗರು ಧನುಷ್ ತಮ್ಮ ತಂಡವನ್ನು ನೋಡಿಕೊಳ್ಳುವ ರೀತಿ, ಅವರೊಂದಿಗೆ ವರ್ತಿಸುವ ರೀತಿ ನಿಜಕ್ಕೂ ಇತರ ನಟರಿಗೆ ಮಾದರಿ ಎಂದು ಅಭಿಪ್ರಾಯಪಟ್ಟಿದ್ದಾರೆ. ತಮ್ಮ ಬಿಡುವಿಲ್ಲದ ಡಿ 50 ಸಿನಿಮಾದ ಶೆಡ್ಯೂಲ್ ನಡುವೆಯೂ ಅವರು ಮದುವೆಗೆ ಆಗಮಿಸಿದ್ದಾರೆ ಎನ್ನಲಾಗಿದೆ.
தனது உதவியாளர் ஆனந்த் திருமண வரவேற்ப்பு நிகழ்ச்சியில் திடீரென வந்து வாழ்த்திய தலைவர் @dhanushkraja sir ❣️🔥🙏 #CaptainMiller #Dhanush pic.twitter.com/Lep0bzGyNR
— Dhanush Trends ™ (@Dhanush_Trends) September 16, 2023