ಚಹಾಲ್ ಜೊತೆಗಿನ ಫೋಟೋ ಮರುಸ್ಥಾಪಿಸಿದ ಧನಶ್ರೀ ವರ್ಮಾ ; ವಿಚ್ಚೇದನ ವದಂತಿಗೆ ‌ʼಬ್ರೇಕ್ʼ

ಧನಶ್ರೀ ವರ್ಮಾ ಮತ್ತೆ ಯಜುವೇಂದ್ರ ಚಹಾಲ್, ಇವರಿಬ್ಬರ ಮದುವೆಯಲ್ಲಿ ಏನೋ ಸರಿ ಇಲ್ಲ ಅಂತಾ ಗಾಸಿಪ್ ಹಬ್ಬಿತ್ತು. ಧನಶ್ರೀ ತನ್ನ ಇನ್ಸ್ಟಾಗ್ರಾಮ್ ಅಲ್ಲಿ ಚಹಾಲ್ ಜೊತೆಗಿನ ಫೋಟೋಗಳನ್ನೆಲ್ಲಾ ಡಿಲೀಟ್ ಮಾಡ್ಬಿಟ್ಟಿದ್ರು. ಅದಕ್ಕೆ ಜನ ಏನೋ ಆಗಿದೆ ಅಂತಾ ಮಾತಾಡ್ಕೊಳ್ತಿದ್ರು.

ಇಷ್ಟೇ ಅಲ್ಲ, ಚಹಾಲ್ ಅವರು ಆರ್‌ಜೆ ಮಹವಾಶ್ ಅನ್ನೋರ ಜೊತೆ ಸುತ್ತಾಡ್ತಿದ್ರಂತೆ. ಅದಕ್ಕೆ ಧನಶ್ರೀ ಇನ್ನೊಂದು ಪೋಸ್ಟ್ ಹಾಕಿದ್ರು. “ಹೆಣ್ಣುಮಕ್ಕಳನ್ನ ಬ್ಲೇಮ್ ಮಾಡೋದು ಫ್ಯಾಷನ್ ಆಗಿದೆ” ಅಂತ. ಅದಕ್ಕೆ ಜನರಿಗೆ ಡೌಟ್ ಜಾಸ್ತಿ ಆಯ್ತು.

ಆದರೆ ಈಗ ಧನಶ್ರೀ ಮತ್ತೆ ಚಹಾಲ್ ಜೊತೆಗಿನ ಫೋಟೋಗಳನ್ನ ಇನ್ಸ್ಟಾಗ್ರಾಮ್ ಅಲ್ಲಿ ಹಾಕಿದ್ದಾರೆ. ಅದಕ್ಕೆ ವಿಚ್ಛೇದನದ ಗಾಸಿಪ್ ಸುಳ್ಳು ಅಂತಾ ಜನ ಮಾತಾಡ್ತಿದ್ದಾರೆ.

ಆದರೆ ಕೆಲವು ಜನ ಹೇಳೋ ಪ್ರಕಾರ, ಧನಶ್ರೀ 60 ಕೋಟಿ ರೂ. ಜೀವನಾಂಶ ಕೇಳಿದ್ದಾರೆ ಅಂತಾ. ಆದ್ರೆ, ಧನಶ್ರೀ ಫ್ಯಾಮಿಲಿ ಅದನ್ನ ಸುಳ್ಳು ಅಂತಾ ಹೇಳಿದೆ.

ಇವರಿಬ್ಬರು 2020 ರಲ್ಲಿ ಮದುವೆಯಾಗಿದ್ದು, ಇನ್ಸ್ಟಾಗ್ರಾಮ್ ರೀಲ್ಸ್ ಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ತಿದ್ರು. ಧನಶ್ರೀ ಚಹಾಲ್ ಅವರ ಕ್ರಿಕೆಟ್ ಮ್ಯಾಚ್ ಗಳಿಗೂ ಹೋಗ್ತಿದ್ರು.

ಈಗ ಗಾಸಿಪ್ ಎಲ್ಲಾ ಸುಳ್ಳು ಅಂತಾ ಗೊತ್ತಾಗಿದೆ. ಆದ್ರೆ, ಇವರಿಬ್ಬರ ಮಧ್ಯೆ ನಿಜವಾಗ್ಲೂ ಏನಾಯ್ತು ಅಂತಾ ಯಾರಿಗೂ ಗೊತ್ತಿಲ್ಲ.

dhanashree Verma

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read