ದೀಪಾವಳಿ ಬೋನಸ್ ವಿಚಾರಕ್ಕೆ ಘೋರ ಕೃತ್ಯ: ಕೆಲಸಗಾರರಿಂದ ಢಾಬಾ ಮಾಲೀಕನ ಹತ್ಯೆ

ನಾಗ್ಪುರ: ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದ ಭೀಕರ ಘಟನೆಯಲ್ಲಿ ಢಾಬಾ ಮಾಲೀಕ ರಾಜು ಧೆಂಗ್ರೆ ಅವರನ್ನು ಅವರ ಇಬ್ಬರು ಕೆಲಸಗಾರರು ಹತ್ಯೆ ಮಾಡಿದ್ದಾರೆ.

ಆರೋಪಿಗಳನ್ನು ಮಧ್ಯಪ್ರದೇಶದ ಮಂಡ್ಲಾ ಮೂಲದ ಛೋಟು ಮತ್ತು ಆದಿ ಎಂದು ಗುರುತಿಸಲಾಗಿದ್ದು ಸದ್ಯ ತಲೆಮರೆಸಿಕೊಂಡಿದ್ದಾರೆ. ಮೂಲಗಳ ಪ್ರಕಾರ, ದೀಪಾವಳಿ ಬೋನಸ್‌ ಗಾಗಿ ಕಾರ್ಮಿಕರ ಬೇಡಿಕೆಯನ್ನು ಪೂರೈಸಲು ಧೆಂಗ್ರೆ ನಿರಾಕರಿಸಿದ್ದೇ ಕೊಲೆಗೆ ಕಾರಣವಾಗಿದೆ.

ಕುಹಿ ತಾಲೂಕಿನ ಸುರ್ಗಾಂವ್ ಗ್ರಾಮದ ಮಾಜಿ ಸರಪಂಚ್ ರಾಜು ಧೇಂಗ್ರೆ ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಸಂತ್ರಸ್ತ ಸುಮಾರು ಒಂದು ತಿಂಗಳ ಹಿಂದೆ ಕಾರ್ಮಿಕ ಗುತ್ತಿಗೆದಾರರ ಮೂಲಕ ಛೋಟು ಮತ್ತು ಆದಿಯನ್ನು ಸೇರಿಸಿಕೊಂಡಿದ್ದರು.

ಆದಿ ಮತ್ತು ಛೋಟು, ಹಣ ಮತ್ತು ದೀಪಾವಳಿ ಬೋನಸ್‌ ಗೆ ಬೇಡಿಕೆಯಿಟ್ಟಿದ್ದು, ನಿರಾಕರಿಸಿದ್ದರಿಂದ ಕೊಲೆ ಮಾಡಿದ್ದಾರೆ. ಹಗ್ಗದಿಂದ ಕತ್ತು ಬಿಗಿದು, ಗಟ್ಟಿಯಾದ ಆಯುಧದಿಂದ ತಲೆಗೆ ಹೊಡೆದು, ಮುಖವನ್ನು ಹರಿತವಾದ ಆಯುಧದಿಂದ ಕತ್ತರಿಸಿದರು. ಅಪರಾಧದ ಇನ್ನೊಬ್ಬ ಸಾಕ್ಷಿ, ಅಡುಗೆ ಕೆಲಸಗಾರ ಜೀವ ಭಯದಿಂದ ಓಡಿಹೋದನು.

ರಾಜು ಧೆಂಗ್ರೆ ಅವರ ದೇಹವು ಧಾಬಾದಲ್ಲಿನ ಮಂಚದ ಮೇಲೆ ಪತ್ತೆಯಾಗಿದೆ. ಆರೋಪಿಗಳನ್ನು ಬಂಧಿಸಲು ಪೊಲೀಸರು ಕ್ರಮಕೈಗೊಂಡಿದ್ದಾರೆ. ಆರ್ಥಿಕ ಮತ್ತು ರಾಜಕೀಯ ಉದ್ದೇಶಗಳನ್ನು ಪರಿಗಣಿಸಿ ವಿವಿಧ ಕೋನಗಳಿಂದ ತನಿಖೆ ಕೈಗೊಂಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read