‘ಡೆವಿಲ್ ಈಸ್ ಬ್ಯಾಕ್’ : ಜೈಲಿನಿಂದ ದರ್ಶನ್ ಎಂಟ್ರಿ ಹೀಗಿರುತ್ತೆ ಎಂದ ‘ಡಿ ಬಾಸ್’ ಫ್ಯಾನ್ಸ್.! |VIDEO

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಗೆ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

ಈ ಹಿನ್ನೆಲೆ ದಚ್ಚು ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ. ದರ್ಶನ್ ನೋಡಲು ಬಳ್ಳಾರಿ ಜೈಲಿನ ಮುಂಭಾಗ ಡಿ ಬಾಸ್ ಫ್ಯಾನ್ಸ್ ದೌಡಾಯಿಸುತ್ತಿದ್ದಾರೆ.

ಇದರ ನಡುವೆ ‘ಡಿ ಕಂಪನಿ’ ಎಂಬ ಟ್ವಿಟರ್ ಖಾತೆಯಿಂದ ಪೋಸ್ಟ್ ಹಂಚಿಕೊಳ್ಳಲಾಗಿದೆ.ದೀಪಾವಳಿಗೆ ಡೆವಿಲ್ ಈಸ್ ಬ್ಯಾಕ್ .. 131 ದಿನಗಳು.. ಕಾಯುವಿಕೆ ಕೊನೆಗೊಳ್ಳುತ್ತದೆ ಎಂದು ನಟ ದರ್ಶನ್ ಅವರ ಸಿನಿಮಾದ ವಿಡಿಯೊವೊಂದನ್ನು ಪೋಸ್ಟ್ ಮಾಡಲಾಗಿದೆ.

ಹಾಗೆಯೇ ಎಲ್ಲಾ ಅಭಿಮಾನಿಗಳಿಗೆ ಈ ಮೂಲಕ ತಿಳಿಸುವುದು ಏನೆಂದರೆ ಡಿ ಬಾಸ್ ರವರು ಬಿಡುಗಡೆಯಾಗಿರುವುದು ಚಿಕಿತ್ಸೆಯ ಸಲುವಾಗಿ ಆದ್ದರಿಂದ, ಅಭಿಮಾನಿಗಳು ದರ್ಶನ್ ಅವರ ಮನೆ ಮುಂದೆ ಹೋಗಿ ಪಟಾಕಿ ಹೊಡೆಯುವುದು, ಕೂಗಾಡುವುದು ಮಾಡುವಂತಿಲ್ಲ, ಹಾಗೂ ಮಾಧ್ಯಮಗಳಿಗೆ, ಬೇರೆ ನಟರಿಗೆ, ಪೊಲೀಸ್ ಅಧಿಕಾರಿಗಳ ಬಗ್ಗೆ ಹಗುರವಾಗಿ ಮಾತನಾಡುವಂತಿಲ್ಲ ಎಂದು ತಿಳಿಸುತ್ತೇವೆ ಎಂದು ಪೋಸ್ಟ್ ಹಂಚಿಕೊಂಡಿದೆ.

https://twitter.com/Dcompany171/status/1851508630706925641

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read