ದೇವರಗುಡ್ಡ: ದೇವರಗುಡ್ಡದಲ್ಲಿ ನಡೆದ ಬಡಿಗೆ ಬಡಿದಾಟ ಜಾತ್ರೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, 15 ಜನರು ಗಾಯಗೊಂಡಿರುವ ಘಟನೆ ನಡೆದಿದೆ.
ಕರ್ನಾಟಕ-ಆಂಧ್ರ ಗಡಿಭಾಗದ ದೇವರಗುಡ್ಡದ ಮಾಳ ಮಲ್ಲೇಶ್ವರ ಸನ್ನಿಧಿಯಲ್ಲಿ ನಡೆಯುವ ಬಡಿಗೆ ಬಡಿದಾಟ ಜಾತ್ರೆಯಲ್ಲಿ ಈ ದುರಂತ ಸಂಭವಿಸಿದೆ. ಉತ್ಸವ ಮೂರ್ತಿಯನ್ನು ತಮ್ಮ ಊರುಗಳಿಗೆ ಒಯ್ಯಲು ಜನರು ದೊಣ್ಣೆಯಿಂದ ಬಡಿದಾಡಿಕೊಳ್ಳುವುದು ಈ ಜಾತ್ರೆಯ ಪದ್ಧತಿ.
ಅರಕೇರ-ನೇರಣಿಕೆ ಗ್ರಾಮಸ್ಥರ ನಡುವೆ ಬಡಿಗೆ ಬಡಿದಾಟ ನಡೆದಿದ್ದು, ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. 15 ಜನರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.