BIG NEWS : ಜಾಮೀನು ಸಿಕ್ಕರೂ H.D ರೇವಣ್ಣಗೆ ತಪ್ಪದ ಸಂಕಷ್ಟ : ಹೈಕೋರ್ಟ್ ಮೆಟ್ಟಿಲೇರಿದ ‘SIT’..!

ಬೆಂಗಳೂರು : ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಹೆಚ್.ಡಿ ರೇವಣ್ಣಗೆ ಜಾಮೀನು ಮಂಜೂರು ಆಗಿದೆ.ಜಾಮೀನು ಸಿಕ್ಕರೂ ರೇವಣ್ಣಗೆ ಸಂಕಷ್ಟ ತಪ್ಪಿಲ್ಲ, ಎಸ್ ಐ ಟಿ ಹೈಕೋರ್ಟ್ ಮೆಟ್ಟಿಲೇರಿದೆ.

ಹೌದು. ಜಾಮೀನು ಪಡೆದಿದ್ದ ಹೆಚ್ ಡಿ ರೇವಣ್ಣಗೆ ವಿಶೇಷ ತನಿಖಾ ತಂಡ ( ಎಸ್ ಐ ಟಿ) ಶಾಕ್ ನೀಡಿದೆ. ಜನಪ್ರತಿನಿಧಿಗಳ ನ್ಯಾಯಾಲಯದ ಜಾಮೀನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದೆ. ರೇವಣ್ಣ ಜಾಮೀನು ಆದೇಶ ವಜಾ ಮಾಡುವಂತೆ ಹೈಕೋರ್ಟ್ ಗೆ ಎಸ್ ಐ ಟಿ ಅರ್ಜಿ ಸಲ್ಲಿಸಿದೆ. ಈ ಹಿನ್ನೆಲೆ ಹೈಕೋರ್ಟ್ ಆದೇಶದ ಬಗ್ಗೆ ಕುತೂಹಲ ಮೂಡಿದೆ. ಹೈಕೋರ್ಟ್ ನಲ್ಲಿ ವಾದ ಮಾಡಲು ರೇವಣ್ಣ ಪರ ವಕೀಲರು ಕೂಡ ಸಜ್ಜಾಗುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಹೊಳೆನರಸೀಪುರದಲ್ಲಿ ದಾಖಲಾಗಿದ್ದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದಲ್ಲಿ ಜಾಮೀನು ಕೋರಿ ಹೆಚ್.ಡಿ.ರೇವಣ್ಣ ಕೋರ್ಟ್ ಮೊರೆ ಹೋಗಿದ್ದರು. ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯ ಅರ್ಜಿ ವಿಚಾರಣೆ ನಡೆಸಿ ಮೇ 16ರಂದು ಇಂದು ಮಧ್ಯಾಹ್ನದವರೆಗೂ ರೇವಣ್ಣಗೆ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ನಂತರ ಮತ್ತೆ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಎಸ್ಐಟಿ ಪರ ವಕೀಲರ ಹಾಗೂ ರೇವಣ್ಣ ಪರ ವಕೀಲರ ವಾದ-ಪ್ರತಿವಾದ ಆಲಿಸಿತ್ತು. ಈ ವೇಳೆ ಮೇ 20ಕ್ಕೆ ಜಾಮೀನು ಅರ್ಜಿ ಆದೇಶವನ್ನು ಕಾಯ್ದಿರಿಸಿದ ಕೋರ್ಟ್, ಸೋಮವಾರದವರೆಗೂ ರೇವಣ್ಣಗೆ ಮಧ್ಯಂತರ ಜಾಮೀನು ಮುಂದುವರೆಯಲಿದೆ ಎಂದು ತಿಳಿಸಿತ್ತು. ನಂತರ ನಿನ್ನೆ ಮೇ 20 ರಂದು ಬೆಂಗಳೂರಿನ 42 ನೇ ಎಸಿಎಂಎಂ ಕೋರ್ಟ್ ಜಾಮೀನು ನೀಡಿ ಆದೇಶ ಹೊರಡಿಸಿದೆ. 5 ಲಕ್ಷ ಬಾಂಡ್, ಒಬ್ಬರ ಶ್ಯೂರಿಟಿ ನೀಡುವಂತೆ ಕೋರ್ಟ್ ಸೂಚನೆ ನೀಡಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read