ʼಥುನಿವುʼ ಚಿತ್ರದಿಂದ ಪ್ರೇರೇಪಿತನಾಗಿ ಬ್ಯಾಂಕ್​ ದರೋಡೆ ಯತ್ನ: ಯುವಕ ಅರೆಸ್ಟ್

ಚೆನ್ನೈ: ಖ್ಯಾತ ನಟ ಅಜಿತ್ ಕುಮಾರ್ ಅಭಿನಯದ ಥುನಿವು ಚಿತ್ರ ಬಹಳ ಖ್ಯಾತಿ ಗಳಿಸಿ, ಬಾಕ್ಸ್​ ಆಫೀಸ್​ನಲ್ಲಿ ಚಿಂದಿ ಉಡಾಯಿಸಿದೆ. ಆದರೆ ಈ ಸಿನಿಮಾದಿಂದ ಪ್ರೇರೇಪಿತನಾದ ಯುವಕನೊಬ್ಬ ಮಾಡಬಾರದ್ದನ್ನು ಮಾಡಿ ಸಿಕ್ಕಿಬಿದ್ದಿದ್ದಾನೆ.

ಈ ಸಿನಿಮಾದ ಸ್ಟೈಲ್​ನಲ್ಲಿ ಬ್ಯಾಂಕ್ ದರೋಡೆ ಮಾಡಲು ಯತ್ನಿಸಿದ ತಮಿಳುನಾಡಿನ ದಿಂಡಿಗಲ್ ಜಿಲ್ಲೆಯ ಪೂಚಿನಾಯಿಕನಪೆಟ್ಟಿಯ ಖಲೀಲ್ ರಹಮಾನ್ ಎಂಬ 25 ವರ್ಷದ ಯುವಕ ಸಿಕ್ಕಿಬಿದ್ದಿದ್ದಾನೆ. ಈತನನ್ನು ಬಂಧಿಸಲಾಗಿದೆ. ಈತ ದಿಂಡಿಗಲ್‌ ಜಿಲ್ಲೆಯ ತಾಡಿಕೊಂಬು ಶಾಖೆಯ ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಅನ್ನು ದರೋಡೆ ಮಾಡಲು ಪ್ರಯತ್ನಿಸಿದ್ದಾನೆ ಎನ್ನಲಾಗಿದೆ.

ಚಿತ್ರದಲ್ಲಿ ತೋರಿಸಿದಂತೆ ಈ ವ್ಯಕ್ತಿ ಕೂಡ ಬ್ಯಾಂಕ್‌ಗೆ ನುಗ್ಗಿ ಬ್ಯಾಂಕ್‌ ನೌಕರರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದನು. ಬ್ಯಾಂಕ್ ದರೋಡೆಗಾಗಿ ಮೆಣಸಿನ ಪುಡಿ, ಪೆಪ್ಪರ್ ಸ್ಪ್ರೇ ಮತ್ತು ಚಾಕುವನ್ನು ಬಳಸಿದ್ದ. ಪ್ಲಾಸ್ಟಿಕ್ ಟ್ಯಾಗ್ ಬಳಸಿ ಮೂವರು ಬ್ಯಾಂಕ್ ಉದ್ಯೋಗಿಗಳನ್ನು ಕಟ್ಟಿ ಹಾಕಿದ್ದ ಎನ್ನಲಾಗಿದೆ. ಆದಾಗ್ಯೂ, ಒಬ್ಬ ಉದ್ಯೋಗಿ ತನ್ನನ್ನು ತಾನೇ ಬಿಡಿಸಿಕೊಂಡು ಸ್ಥಳೀಯ ಜನರಿಗೆ ಮಾಹಿತಿ ನೀಡಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read