ಪಾಕೆಟ್ ಮನಿ ಕೊಡಲಿಲ್ಲವೆಂದು ತಂದೆಯ ತಲೆ ಜಜ್ಜಿ ಹತ್ಯೆ ಮಾಡಿದ ಪಾಪಿ ಪುತ್ರ

ಪಾಕೆಟ್ ಮನಿ ಕೊಡಲಿಲ್ಲವೆಂದು ಮಗನೇ ಅಪ್ಪನನ್ನು ಕೊಂದು ಹಾಕಿರೋ ಆಘಾತಕಾರಿ ಘಟನೆ
ಮಧ್ಯಪ್ರದೇಶದ ಇಂದೋರ್ ಜಿಲ್ಲೆಯಲ್ಲಿ ನಡೆದಿದೆ.

2,000 ರೂಪಾಯಿಯನ್ನು ಪಾಕೆಟ್ ಮನಿಯಾಗಿ ನೀಡಲು ನಿರಾಕರಿಸಿದ್ದರಿಂದ 25 ವರ್ಷದ ಮಗ ತನ್ನ ತಂದೆಯನ್ನು ಹೊಡೆದು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಬು ಚೌಧರಿ (50) ಎಂಬ ರೈತ ಜೂನ್ 15 ರ ರಾತ್ರಿ ದೇಪಾಲ್‌ಪುರ ಪ್ರದೇಶದ ಹೊಲವೊಂದರಲ್ಲಿ ಶವವಾಗಿ ಪತ್ತೆಯಾಗಿದ್ದರು. ಅಪರಾಧ ನಡೆದ ಸ್ಥಳದಿಂದ ಸಂಗ್ರಹಿಸಿದ ತನಿಖೆ ಮತ್ತು ಸಾಕ್ಷ್ಯದ ಆಧಾರದ ಮೇಲೆ ಪೊಲೀಸರು ಮೃತನ ಮಗ ಸೋಹನ್‌ನನ್ನು ಬಂಧಿಸಿದ್ದಾರೆ ಎಂದು ಎಸ್ ಪಿ ತಿಳಿಸಿದ್ದಾರೆ.

ಆರೋಪಿಯು ಮಾದಕ ವ್ಯಸನಿಯಾಗಿದ್ದು ತಂದೆಗೆ ತಮ್ಮ ಜಮೀನಿನ ಕೆಲಸದಲ್ಲಿ ಸಹಾಯ ಮಾಡುತ್ತಿದ್ದ. “ಜೂನ್ 15 ರ ರಾತ್ರಿ ಸೋಹನ್ ತನ್ನ ತಂದೆಗೆ ಪಾಕೆಟ್ ಮನಿಯಾಗಿ 2,000 ರೂ. ಕೇಳಿದ್ದ. ಆದರೆ ಅವರು ದುಡ್ಡು ಕೊಡಲು ನಿರಾಕರಿಸಿದರು. ಇದರಿಂದ ಕೋಪಗೊಂಡ ಸೋಹನ್ ಗದ್ದೆಯಿಂದ ಕಲ್ಲು ಎತ್ತಿಕೊಂಡು ತಂದೆಯ ತಲೆಯನ್ನು ಜಜ್ಜಿಹಾಕಿದ” ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. ಪ್ರಕರಣದ ಬಗ್ಗೆ ವಿವರವಾದ ತನಿಖೆ ನಡೆಸಲಾಗುತ್ತಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read