ʼಉಬರ್ʼ ನಲ್ಲಿ ಪ್ರಯಾಣಿಸುವಾಗಲೇ ಚಾಲಕನಿಗೆ ಅನಾರೋಗ್ಯ ; ಸ್ಟೀರಿಂಗ್ ಹಿಡಿದ ಮಹಿಳೆಯಿಂದ ಮಹತ್ವದ ಸಂದೇಶ | Watch Video

ದೆಹಲಿ ಮೂಲದ ಮಹಿಳೆಯೊಬ್ಬರು ಉಬರ್ ಕ್ಯಾಬ್‌ನಲ್ಲಿ ಪ್ರಯಾಣಿಸುತ್ತಿದ್ದಾಗ, ಚಾಲಕ ಮಾರ್ಗಮಧ್ಯೆ ಅನಾರೋಗ್ಯಕ್ಕೆ ಒಳಗಾದರು. ಆಗ ಮಹಿಳೆ ವಾಹನವನ್ನು ಚಲಾಯಿಸಿ ಪ್ರಯಾಣವನ್ನು ಪೂರ್ಣಗೊಳಿಸಿದರು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮಹಿಳೆ ತನ್ನ ಪುಟ್ಟ ಮಗಳು, ಅಜ್ಜಿ ಮತ್ತು ತಾಯಿಯೊಂದಿಗೆ ಪ್ರಯಾಣಿಸುತ್ತಿದ್ದರು. “ನಿಮ್ಮೆಲ್ಲರಿಗೂ ನನ್ನ ಸಂದೇಶವೇನೆಂದರೆ ಇಂತಹ ಸಂದರ್ಭಗಳಿಗಾಗಿ ದಯವಿಟ್ಟು ಚಾಲನೆ ಕಲಿಯಿರಿ” ಎಂದು ಮಹಿಳೆ ಹೇಳಿದ್ದಾರೆ. ಮಾರ್ಚ್ 18 ರಂದು ಈ ಘಟನೆ ನಡೆದಿದೆ.

ಈ ಘಟನೆಗೆ ಸಂಬಂಧಿಸಿದಂತೆ, ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಅನೇಕ ಬಳಕೆದಾರರು ಮಹಿಳೆಯ ಕಾರ್ಯವನ್ನು ಶ್ಲಾಘಿಸಿದ್ದಾರೆ, ಮತ್ತೆ ಕೆಲವರು ಇಂತಹ ಪರಿಸ್ಥಿತಿಯಲ್ಲಿ ಚಾಲನೆ ಬರದಿದ್ದರೆ ಏನು ಮಾಡಬೇಕು ಎಂದು ಪ್ರಶ್ನಿಸಿದ್ದಾರೆ. ಕ್ಯಾಬ್ ಅಗ್ರಿಗೇಟರ್‌ಗಳು ಇಂತಹ ತುರ್ತು ಪರಿಸ್ಥಿತಿಗಳಿಗೆ ಆಕಸ್ಮಿಕ ಯೋಜನೆಗಳನ್ನು ಹೊಂದಿರಬೇಕೇ ಎಂಬ ಚರ್ಚೆಗಳು ನಡೆಯುತ್ತಿವೆ.

 

View this post on Instagram

 

A post shared by Amaayra Makeover (@amaayra_makeover)

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read