ಆಘಾತಕಾರಿ ಘಟನೆಯೊಂದರಲ್ಲಿ 19 ವರ್ಷದ ಯುವಕ ದೆಹಲಿಯ ಪ್ರಗತಿ ಮೈದಾನದ ಸುರಂಗದಲ್ಲಿ ಬೈಕ್ ಅಪಘಾತಕ್ಕೀಡಾಗಿ ತುರ್ತು ಕರೆ ಮಾಡಲು ನೆಟ್ ವರ್ಕ್ ಸಿಗ್ನಲ್ ಸಿಗದೇ ಆಸ್ಪತ್ರೆಗೆ ತಲುಪಿಸಲು ತಡವಾಗಿ ಮೃತಪಟ್ಟಿದ್ದಾನೆ.
1.3 ಕಿಲೋಮೀಟರ್ ಉದ್ದದ ಸುರಂಗದೊಳಗೆ ಸಂಪರ್ಕದ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ತಲುಪಲು ತಡವಾಗಿ ಸಾವನ್ನಪ್ಪಿದ್ದಾರೆ.
ಸೋಮವಾರ ರಾತ್ರಿ ಉತ್ತರ ಪ್ರದೇಶದ ಮೀರತ್‌ನಿಂದ ಹಿಂತಿರುಗುತ್ತಿದ್ದ 19 ವರ್ಷದ ರಾಜನ್ ರೈ ಸುರಂಗದೊಳಗೆ ಅಪಘಾತಕ್ಕೀಡಾಗಿದ್ದರು. ಸುರಂಗದೊಳಗೆ ಕಳಪೆ ಸಂಪರ್ಕದ ಸಮಸ್ಯೆಯಿಂದಾಗಿ ವಾಹನ ಸವಾರರು ಸಹಾಯಕ್ಕಾಗಿ ಪೊಲೀಸರಿಗೆ ತುರ್ತುಕರೆ ಮಾಡಲು ಸಾಧ್ಯವಾಗಲಿಲ್ಲ, ಇದರಿಂದಾಗಿ ತುರ್ತು ಸೇವೆಗಳು ಸಮಯಕ್ಕೆ ತಲುಪಲು ವಿಳಂಬವಾಯಿತು ಎಂದು ತಿಳಿದುಬಂದಿದೆ.
ಅಪಘಾತದಲ್ಲಿ ರಾಜನ್ ರೈ ಅವರ ಹೆಲ್ಮೆಟ್ ಸಂಪೂರ್ಣ ನಜ್ಜುಗುಜ್ಜಾಗಿದ್ದರಿಂದ ತಲೆಗೆ ಗಂಭೀರ ಗಾಯಗಳಾಗಿದ್ದವು. ತಕ್ಷಣವೇ ಲೇಡಿ ಹಾರ್ಡಿಂಜ್ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಯಿತಾದರೂ ಅಲ್ಲಿ ಅವರು ಚಿಕಿತ್ಸೆ ವೇಳೆ ಸಾವನ್ನಪ್ಪಿದರು.
ಕಳಪೆ ಸಂಪರ್ಕದ ಕಾರಣ ಸುರಂಗದೊಳಗೆ ತುರ್ತು ಕರೆ ಮಾಡಲು ಸಾಧ್ಯವಾಗದ ಕಾರಣ ಸಂತ್ರಸ್ತರ ಕುಟುಂಬ ಈಗ ಕಾನೂನು ಕ್ರಮ ತೆಗೆದುಕೊಳ್ಳಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಸುರಂಗವು ಸುಗಮ ಸಂಚಾರಕ್ಕಾಗಿ ಸೌಲಭ್ಯಗಳನ್ನು ಹೊಂದಿದೆ ಮತ್ತು ಸ್ಮಾರ್ಟ್ ಅಗ್ನಿಶಾಮಕ ನಿರ್ವಹಣಾ ವ್ಯವಸ್ಥೆ, ಡಿಜಿಟಲ್ ನಿಯಂತ್ರಿತ ಸಿಸಿ ಕ್ಯಾಮೆರಾ ಇತ್ಯಾದಿಗಳನ್ನು ಹೊಂದಿದೆ ಎಂದು ಹೇಳಲಾಗುತ್ತದೆ.
1.3 ಕಿಮೀ ಉದ್ದದ ಪ್ರಗತಿ ಮೈದಾನದ ಸುರಂಗವನ್ನು ಕಳೆದ ವರ್ಷ ಉದ್ಘಾಟಿಸಲಾಯಿತು. ಇದು ಪ್ರಮುಖ ಸುರಂಗ ಮತ್ತು ಐದು ಅಂಡರ್‌ಪಾಸ್‌ಗಳನ್ನು ಒಳಗೊಂಡಿರುವ ಪ್ರಗತಿ ಮೈದಾನದ ಇಂಟಿಗ್ರೇಟೆಡ್ ಟ್ರಾನ್ಸಿಟ್ ಕಾರಿಡಾರ್ ಯೋಜನೆಯ ಭಾಗವಾಗಿದೆ.
#BREAKING | #Biker killed in a road accident at the Pragati Maidan tunnel in #Delhi. pic.twitter.com/b6trhhpWAc
— Mirror Now (@MirrorNow) May 24, 2023