Viral Video: ಮೊಬೈಲ್ ಎಗರಿಸುವಾಗಲೇ ಸಿಕ್ಕಿಬಿದ್ದ ಕಳ್ಳ; ವಿದ್ಯಾರ್ಥಿಯಿಂದ ಹಿಗ್ಗಾಮುಗ್ಗಾ ಥಳಿತ…!

ಜೇಬುಗಳ್ಳರನ್ನ ಹಿಡಿದು ಸಾರ್ವಜನಿಕವಾಗಿ ಥಳಿಸುವಂತಹ ಅನೇಕ ಪ್ರಕರಣಗಳು ದಿನನಿತ್ಯ ಕಾಣುತ್ತವೆ. ಇಂಥದ್ದೇ ಪ್ರಕರಣವೊಂದು ದೆಹಲಿಯಲ್ಲಿ ಜರುಗಿದ್ದು ತನ್ನ ಜೇಬಿನಿಂದ ಮೊಬೈಲ್ ಕದಿಯಲು ಯತ್ನಿಸಿದ ಕಳ್ಳನನ್ನು ಶಾಲಾ ವಿದ್ಯಾರ್ಥಿಯೊಬ್ಬ ಹಿಡಿದು ಥಳಿಸಿದ್ದಾನೆ.

ಮೋತಿ ನಗರ ಪ್ರದೇಶದಲ್ಲಿ ವಿದ್ಯಾರ್ಥಿಯೊಬ್ಬ ತನ್ನ ಫೋನ್ ಕದಿಯಲು ಪ್ರಯತ್ನಿಸುತ್ತಿದ್ದನೆಂದು ಆರೋಪಿಸಿ ವ್ಯಕ್ತಿಯೊಬ್ಬನಿಗೆ ಆಕ್ರಮಣಕಾರಿಯಾಗಿ ಥಳಿಸಿ ಕಪಾಳಮೋಕ್ಷ ಮಾಡಿದ್ದಾನೆ. ಈ ವೀಡಿಯೊ ವೈರಲ್ ಆಗಿದ್ದು ಇಂಟರ್ನೆಟ್ ಬಳಕೆದಾರರು ಹಲವು ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

ವಿದ್ಯಾರ್ಥಿಯು ಕಳ್ಳನೆಂದು ಆರೋಪಿಸಲ್ಪಟ್ಟವನಿಗೆ ಕ್ರೂರವಾಗಿ ಕಪಾಳಮೋಕ್ಷ ಮಾಡುತ್ತಿದ್ದು ಗುದ್ದಿದ್ದಾನೆ. ಆತನ ಟೀ ಶರ್ಟ್ ಹಿಡಿದು ಬೆದರಿಕೆ ಹಾಕಿದ್ದಾನೆ. ಕಳ್ಳ ತಪ್ಪಿಸಿಕೊಂಡು ಹೋಗಲು ಯತ್ನಿಸಿದರೂ ಬಿಡದೇ, ಆತನ ವಿವರಣೆಯನ್ನೂ ಕೇಳದೆ ವಿದ್ಯಾರ್ಥಿ ಹೊಡೆಯುತ್ತಲೇ ಇದ್ದ. ಆದರೆ ಈ ವೇಳೆ ಕೆಲವರು ಸುಮ್ಮನೆ ನೋಡುತ್ತಾ ನಿಂತಿದ್ದರೆ, ಹಲವರು ವಿದ್ಯಾರ್ಥಿಯ ಕ್ರಮವನ್ನು ಬೆಂಬಲಿಸಿದ್ದಾರೆ. ಕೆಲವರು ಇದನ್ನು ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ವೈರಲ್ ವಿಡಿಯೋ ವೀಕ್ಷಿಸಿದ ಹಲವರು ಈ ವಿದ್ಯಾರ್ಥಿಯನ್ನು ಒಲಿಂಪಿಕ್ಸ್ ಬಾಕ್ಸಿಂಗ್‌ಗೆ ಕಳುಹಿಸಬೇಕೆಂದು ಹೇಳಿದ್ದರೆ ಇತರರು ವಿದ್ಯಾರ್ಥಿಯು ವ್ಯಕ್ತಿಯ ಮೇಲೆ ಮಾಡಿದ ಹಲ್ಲೆಯನ್ನು ಸಮರ್ಥಿಸಿಕೊಂಡಿದ್ದಾರೆ. ಮತ್ತೊಂದು ಗುಂಪು ಫೋನ್ ಕದಿಯಲು ಪ್ರಯತ್ನಿಸಿದ ವ್ಯಕ್ತಿಯನ್ನು ಈ ರೀತಿ ಹೊಡೆಯುವ ಹಕ್ಕು ಯಾರಿಗೂ ಇಲ್ಲ, ಆತ ಪೊಲೀಸರಿಗೆ ಮಾಹಿತಿ ನೀಡಬೇಕಿತ್ತು ಎಂದಿದ್ದಾರೆ.

https://twitter.com/gharkekalesh/status/1818980264561029312?ref_src=twsrc%5Etfw%7Ctwcamp%5Etweetembed%7Ctwterm%5E1818980264561029312%7Ctwgr%5E4ba649310d3fa3e188a3c63e74ad803f75b3da23%7Ctwcon%5Es1_&ref_ur

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read