ಮತ್ತೊಂದು ಭೀಕರ ಹತ್ಯೆ ಪ್ರಕರಣ ಬಹಿರಂಗ: ಪ್ರಿಯಕರನೊಂದಿಗೆ ಸೇರಿ ಪತಿ ಹತ್ಯೆ ಮಾಡಿ ರೆಫ್ರಿಜರೇಟರ್ ನಲ್ಲಿಟ್ಟಿದ್ದ ಮಹಿಳೆ ಅರೆಸ್ಟ್

ನವದೆಹಲಿಯ ಶ್ರದ್ಧಾ ವಾಲ್ಕರ್ ಹತ್ಯೆಯಾದ ರೀತಿಯದ್ದೇ ಮತ್ತೊಂದು ಪ್ರಕರಣ ಗೌಹಾತಿಯಲ್ಲಿ ಬಹಿರಂಗವಾಗಿದೆ. ಮಹಿಳೆಯೊಬ್ಬಳು ಪ್ರಿಯಕರ ಹಾಗೂ ಆತನ ಸ್ನೇಹಿತನೊಂದಿಗೆ ಸೇರಿ ತನ್ನ ಪತಿ ಹಾಗೂ ಅತ್ತೆಯನ್ನು ಹತ್ಯೆ ಮಾಡಿ ರೆಫ್ರಿಜರೇಟರ್ ನಲ್ಲಿ ಇಟ್ಟಿದ್ದು, ಘಟನೆ ನಡೆದ ಏಳು ತಿಂಗಳ ಬಳಿಕ ಇದೀಗ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂದನಾ ಕಲಿಟಾ ಎಂಬಾಕೆ ತನ್ನ ಪತಿ ಅಮರ್ ಜ್ಯೋತಿ ಡೇ ಹಾಗೂ ಅತ್ತೆ ಶಂಕರಿ ಡೇ ಅವರನ್ನು ಆಗಸ್ಟ್ 17, 2022 ರಂದು ಹತ್ಯೆ ಮಾಡಿದ್ದು 2023 ರ ಫೆಬ್ರವರಿ 19ರಂದು ಘಟನೆ ಬೆಳಕಿಗೆ ಬಂದಿದೆ. ಇದೀಗ ಪ್ರಕರಣದ ಎಲ್ಲ ಆರೋಪಿಗಳನ್ನು ಸಹ ಬಂಧಿಸಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಗೌಹಾತಿಯ ನೋನ್ಮತಿ ಏರಿಯಾದಲ್ಲಿ ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದ ಬಂದನಾ ಕಲಿಟಾ, ಪತಿ ಹಾಗೂ ಅತ್ತೆಯನ್ನು ಹತ್ಯೆ ಮಾಡಿದ ಬಳಿಕ ಶವಗಳನ್ನು ತುಂಡು ತುಂಡಾಗಿ ಕತ್ತರಿಸಿ ರೆಫ್ರಿಜರೇಟರ್ ನಲ್ಲಿ ಇಟ್ಟಿದ್ದಳು. ನಂತರ ಮನೆಯನ್ನು ತೊರೆದು ಪ್ರಿಯಕರನ ಜೊತೆ ವಾಸಿಸಲು ಆರಂಭಿಸಿದ್ದಳು.

ನಂತರ ಒಂದು ದಿನ ವಾಪಸ್ ಬಂದು ದೇಹದ ಭಾಗಗಳನ್ನು ತೆಗೆದುಕೊಂಡು ಹೋಗಿ ಮೇಘಾಲಯದ ದಾವ್ಕಿಯಲ್ಲಿ ಬಿಸಾಡಿದ್ದಳು. ಅಲ್ಲದೆ ಬೆಡ್ ಸೇರಿದಂತೆ ಮನೆಯಲ್ಲಿದ್ದ ಕೆಲವು ವಸ್ತುಗಳನ್ನು ಟೆರಸ್ ಮೇಲೆ ತಂದು ಸುಟ್ಟು ಹಾಕಿದ್ದಳು. ಇದೀಗ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಇಷ್ಟು ಬರ್ಬರವಾಗಿ ಕೊಲೆ ಮಾಡಲು ಕಾರಣ ಏನಿರಬಹುದು ಎಂಬುದರ ತನಿಖೆ ನಡೆಸುತ್ತಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read