ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಐದು ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಲಾಗಿದೆ.
ಇ-ಮೇಲ್ ಮೂಲಕ ಶಾಲೆಯ ಆಡಳಿತ ಮಂಡಳಿಗೆ ಬಾಂಬ್ ಬೆದರಿಕೆ ಸಂದೇಶ ರವಾನಿಸಲಾಗಿದೆ. ದ್ವಾರಕಾದ ಸೇಮ್ಟ್ ಥಾಮಸ್, ವಸಂತ್ ಕುಂಜ್ ನ ವಸಂತ್ ವ್ಯಾಲಿ, ಹೌಜ್ ಖಾಸ್ ನಲ್ಲಿರುವ ಮದರ್ ಇಂಟರ್ ನ್ಯಾಷನಲ್, ಲೋಧಿ ಎಸ್ಟೇಟ್ ನಲ್ಲಿರುವ ಸರ್ದಾರ್ ಪಟೇಲ್ ವಿದ್ಯಾಲಯ ಹಾಗೂ ಪಶ್ಚಿಮ ವಿಹಾರ್ ನಲ್ಲಿರುವ ರಿಚ್ ಮಂಡ್ ಗ್ಲೋಬಲ್ ಶಾಲೆಗೆ ಇಂದು ಬೆಳಿಗ್ಗೆ ಬೆದರಿಕೆ ಸಂದೇಶ ರವಾನಿಸಲಾಗಿದೆ.
ಸೇಂಟ್ ಥಾಮಸ್ ಶಾಲೆಗೆ ಕಳೆದ 24 ಗಂಟೆಯಲ್ಲಿ ಇದು ಎರಡನೇ ಬಾಂಬ್ ಬೆದರಿಕೆ ಕರೆಯಾಗಿದೆ. ದೆಹಲಿ ನಗರದ ಶಾಲೆಗಳಿಗೆ ಈಊವರೆಗೆ ಹತ್ತು ಬಂಬ್ ಬೆದರಿಕೆ ಕರೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನಾ ಸ್ಥಾಕ್ಕೆ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳ ದೌಡಾಯಿಸಿ ಪರಿಶೀಲನೆ ನಡೆಸಿದೆ.