ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಗ್ಯಾಂಗ್ ಅರೆಸ್ಟ್

ನವದೆಹಲಿ: ಸೆಕ್ಸ್ ರಾಕೆಟ್ ನಡೆಸುತ್ತಿದ್ದ ಗ್ಯಾಂಗ್ ಭೇದಿಸಿದ ದೆಹಲಿ ಪೊಲೀಸರು 4 ಆರೋಪಿಗಳನ್ನು ಬಂಧಿಸಿದ್ದಾರೆ. ತಮ್ಮ ಪ್ರದೇಶದಲ್ಲಿ ಸೆಕ್ಸ್ ರಾಕೆಟ್’ ಪ್ರಕರಣವು ಬೆಳಕಿಗೆ ಬಂದ ನಂತರ ದೆಹಲಿ ಪೊಲೀಸ್‌ ನ ಹಿರಿಯ ಅಧಿಕಾರಿಗಳು ಸೋಮವಾರ ನಾಲ್ವರು ಪೊಲೀಸ್ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಂಡಿದ್ದಾರೆ.

ಪೂರ್ವ ಪೊಲೀಸ್ ಉಪ ಕಮಿಷನರ್ ಅಮೃತಾ ಗುಗುಲೋತ್ ಪ್ರಕಾರ, 17 ವರ್ಷದ ಬಾಲಕಿ ಅತುಲ್, ವಿನಯ್, ಸಾಹಿಲ್, ಸಾನಿಯಾ, ಇಮ್ತಿಯಾಜ್ ಮತ್ತು ನಿತೇಶ್ ವಿರುದ್ಧ ವೇಶ್ಯಾವಾಟಿಕೆಗೆ ಒತ್ತಾಯಿಸಿದ ಆರೋಪದ ಮೇಲೆ ಲಕ್ಷ್ಮಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸುಮಾರು 10 ತಿಂಗಳ ಹಿಂದೆ ದೂರುದಾರರು ಸಾನಿಯಾಳನ್ನು ಭೇಟಿಯಾಗಿ ಸ್ನೇಹ ಬೆಳೆಸಿದರು. ಹೆಣ್ಣುಮಕ್ಕಳಿಗೆ ಕೆಲಸ ಕೊಡಿಸುವುದಾಗಿ ಸಾನಿಯಾ ಹೇಳಿದ್ದಳು. ನಂತರ ಒಂದೂವರೆ ತಿಂಗಳ ಹಿಂದೆ ಸಾನಿಯಾ ಲಕ್ಷ್ಮಿನಗರದ ವಿಜಯ್ ಬ್ಲಾಕ್‌ನ ಫ್ಲಾಟ್‌ ಗೆ ಕರೆಸಿಕೊಂಡಿದ್ದಳು. ದೆಹಲಿಯಲ್ಲಿ ಆಕೆಯನ್ನು ಆರೋಪಿಗಳಾದ ಅತುಲ್, ಸಾಹಿಲ್, ನಿತೇಶ್, ವಿನಯ್ ಎಂಬುವರಿಗೆ ಪರಿಚಯಿಸಿದ್ದಳು. ಆರೋಪಿಗಳು ಅವಳನ್ನು ಬೆದರಿಸಿ ವೇಶ್ಯಾವಾಟಿಕೆಗೆ ಒತ್ತಾಯಿಸಿದ್ದಾರೆ. ಅದಕ್ಕೆ ಬದಲಾಗಿ ಅವರು ಹಣ ಗಳಿಸಿದ್ದಾರೆ.

ಅಲ್ಲದೇ, ಇದನ್ನು ಬೇರೆಯವರಿಗೆ ಬಹಿರಂಗಪಡಿಸಿದಂತೆ ಅಪ್ರಾಪ್ತರನ್ನು ಬೆದರಿಸುತ್ತಿದ್ದರು. ದೂರುದಾರರು ನೀಡಿದ ಮಾಹಿತಿ ಮತ್ತು ವಿವರಗಳ ಆಧಾರದ ಮೇಲೆ ವಿನಯ್, ಅತುಲ್, ಸಾಹಿಲ್ ಮತ್ತು ನಿತೇಶ್ ಎಂಬ ನಾಲ್ವರನ್ನು ಬಂಧಿಸಲಾಗಿದ್ದು, ಇಮ್ತಿಯಾಜ್, ಸಾನಿಯಾ ಮತ್ತು ಒಬ್ಬ ಬಾಲಕಿ ತಲೆಮರೆಸಿಕೊಂಡಿದ್ದಾರೆ ಎಂದು ಡಿಸಿಪಿ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read