Delhi horror: ಅಪಘಾತಕ್ಕೂ ಕೆಲಕ್ಷಣಗಳ ಹಿಂದಿನ ದೃಶ್ಯಾವಳಿ ಸಿಸಿ ಟಿವಿಯಲ್ಲಿ ಸೆರೆ; ಗೆಳತಿಯರಿಬ್ಬರ ನಡುವೆ ನಡೆದಿತ್ತು ಜಗಳ

ದೆಹಲಿಯಲ್ಲಿ ಯುವತಿಯ ಭೀಕರ ಅಪಘಾತ ಕೇಸ್ ನಲ್ಲಿ ಸಿಕ್ಕಿರುವ ಅಪ್ ಡೇಟ್ ಮಾಹಿತಿಯಲ್ಲಿ ಮೃತ ಯುವತಿ ಅಂಜಲಿ ಮತ್ತು ಆಕೆಯ ಗೆಳತಿ ನಿಧಿ ಹೋಟೆಲ್ ನ ಹೊರಗಡೆ ಜಗಳವಾಡಿರೋದು ಗೊತ್ತಾಗಿದೆ.

ತನ್ನ ಸ್ಕೂಟಿಗೆ ಕಾರು ಡಿಕ್ಕಿ ಹೊಡೆದು ಸುಮಾರು 12 ಕಿ.ಮೀ ಎಳೆದೊಯ್ದ ನಂತರ ಸಾವನ್ನಪ್ಪಿದ 23 ವರ್ಷದ ಯುವತಿ ಅಂಜಲಿ ತನ್ನ ಸ್ನೇಹಿತೆ ನಿಧಿಯೊಂದಿಗೆ ಜಗಳವಾಡಿರೋದು ಅಪಘಾತದ ಹಿಂದಿನ ಕ್ಷಣಗಳ ಸಿಸಿಕ್ಯಾಮೆರಾ ದೃಶ್ಯಾವಳಿಗಳಲ್ಲಿ ಸೆರೆಯಾಗಿದೆ.

ವಿಡಿಯೋ ತುಣುಕಿನಲ್ಲಿ ಅಂಜಲಿ ಮತ್ತು ನಿಧಿ ಹೋಟೆಲ್‌ನಿಂದ ಸ್ಕೂಟಿ ನಿಲ್ಲಿಸಿದ ಸ್ಥಳಕ್ಕೆ ಹೊರಬರುವುದನ್ನು ಕಾಣಬಹುದು. ನಂತರ ಯಾವುದೋ ವಿಷಯಕ್ಕೆ ಜಗಳವಾಡುತ್ತಾರೆ. ಅಂಜಲಿ ನಿಧಿಯಿಂದ ಏನನ್ನೋ ಕಸಿದುಕೊಳ್ಳಲು ಪ್ರಯತ್ನಿಸುತ್ತಿರುವುದು ಕಂಡುಬರುತ್ತದೆ. ಸ್ಕೂಟಿ ಸವಾರಿ ಮಾಡುವ ವಿಚಾರಕ್ಕೆ ಇಬ್ಬರು ಯುವತಿಯರ ನಡುವೆ ಜಗಳವಾಗಿದ್ದು, ಅಂಜಲಿ ತನ್ನ ಸ್ನೇಹಿತೆಯಿಂದ ಕೀ ಕಸಿದುಕೊಳ್ಳಲು ಪ್ರಯತ್ನಿಸುತ್ತಿದ್ದಳು ಎಂದು ಪೊಲೀಸರು ಶಂಕಿಸಿದ್ದಾರೆ.

ಈ ವೀಡಿಯೊ ಘಟನೆಗಳ ನಂತರ ಇಬ್ಬರು ಹುಡುಗಿಯರು ಓಡಿಸುತ್ತಿದ್ದ ಸ್ಕೂಟಿಗೆ ಬಲೆನೊ ಕಾರು ಡಿಕ್ಕಿ ಹೊಡೆದು ಅಂಜಲಿಯನ್ನು ಸುಮಾರು 12 ಕಿಲೋಮೀಟರ್ ಎಳೆದೊಯ್ದು ಸಾವಿಗೆ ಕಾರಣವಾಯಿತು,. ಆದರೆ ಆಕೆಯ ಸ್ನೇಹಿತೆ ಪ್ರಾಣಾಪಾಯದಿಂದ ಪಾರಾಗಿದ್ದು, ಸ್ಥಳದಿಂದ ಓಡಿ ಮನೆಗೆ ತೆರಳಿದ್ದಳು.

ಕಾರಿನಲ್ಲಿದ್ದ ಐವರನ್ನು ಬಂಧಿಸಲಾಗಿದ್ದು, ಆ ರಾತ್ರಿ ನಿಜವಾಗಿ ಏನಾಯಿತು ಎಂಬುದನ್ನು ತಿಳಿದುಕೊಳ್ಳಲು ದೆಹಲಿ ಪೊಲೀಸರು ಆರೋಪಿಗಳು ಮತ್ತು ಇತರ ಸಾಕ್ಷಿಗಳಿಂದ ಹೇಳಿಕೆಗಳನ್ನು ಸಂಗ್ರಹಿಸುವ ಪ್ರಕ್ರಿಯೆಯಲ್ಲಿದ್ದಾರೆ.

https://twitter.com/i/web/status/1610224842367971330

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read