ನವದೆಹಲಿ: ಇಥಿಯೋಪಿಯಾದಲ್ಲಿ ಜ್ವಾಲಾಮುಖಿ ಸ್ಫೋಟಗೊಂಡ ಪರಿಣಾಮ ದಟ್ಟ ಹೊಗೆ ಆವರಿಸ್ದ್ದು, ಇದರೊಂದಿಗೆ ಹಾರುವ ಬೂದಿಯು ದೆಹಲಿಯನ್ನೂ ತಲುಪಿದೆ. ಈ ಹಿನ್ನೆಲೆಯಲ್ಲಿ ಹಲವು ವಿಮಾನ ಹಾರಟ ರದ್ದಾಗಿದ್ದರೆ, ಮತ್ತೆ ಹಲವು ವಿಮಾನಗಳು ವಿಳಂಬವಾಗಿವೆ.
ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ 7 ಅಂತರಾಷ್ಟ್ರೀಯ ವಿಮಾನ ಹಾರಾಟ ರದ್ದುಗೊಳಿಸಲಾಗಿದೆ. 10 ವಿಮಾನಗಳ ಹಾರಾಟ ವಿಳಂಬವಾಗಿವೆ.
ಏರ್ ಇಂಡಿಯಾ ವಿಮಾನ ತನ್ನ 13 ವಿಮಾನಗಳ ಹಾರಾಟವನ್ನು ರದ್ದುಗೊಳಿಸಿದೆ. ಆಕಾಶ್ ಏರ್, ಇಂಡಿಗೋ ಸೇರಿದಂತೆ ಹಲವು ವಿಮಾನಯಾನ ಸಂಸ್ಥೆಗಳು ತಮ್ಮ ವಿಮಾನ ಹಾರಾಟವನ್ನು ರದ್ದುಪಡಿಸಿವೆ.
